October 14, 2026
Wednesday, October 14, 2026
spot_img

CINE | ‘ಧುರಂಧರ್ 2’ ಕ್ರೇಜ್: ಸಿನಿಮಾ ನೋಡಲು ಮುಗಿಬಿದ್ದ ಪಾಕಿಗಳು, ನೆಟ್‌ಫ್ಲಿಕ್ಸ್ ಸರ್ವರ್ ಕ್ರ್ಯಾಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧುರಂಧರ್ 2 ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಬಳಿಕ ಇದೀಗ ಒಟಿಟಿಯಲ್ಲೂ ಹೊಸ ದಾಖಲೆ ಬರೆಯುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸದ್ದು ಮಾಡಿರುವ ಈ ಸಿನಿಮಾ, ಪಾಕಿಸ್ತಾನದಲ್ಲೂ ಭಾರೀ ಕ್ರೇಜ್ ಹುಟ್ಟಿಸಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನಂಬರ್ 1 ಟ್ರೆಂಡಿಂಗ್ ಸ್ಥಾನಕ್ಕೇರಿದೆ.

ಮೇ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ನೋಡಲು ಪಾಕಿಸ್ತಾನದ ಸಿನಿಪ್ರಿಯರು ಮಧ್ಯರಾತ್ರಿವರೆಗೂ ಕಾಯುತ್ತಿದ್ದರೆಂಬ ಮಾಹಿತಿ ಹೊರಬಂದಿದೆ. ಸಿನಿಮಾ ಸ್ಟ್ರೀಮಿಂಗ್ ಆರಂಭವಾಗುತ್ತಿದ್ದಂತೆ ಸಾವಿರಾರು ಮಂದಿ ಒಟ್ಟಿಗೆ ವೀಕ್ಷಣೆ ಆರಂಭಿಸಿದ್ದರಿಂದ ಕೆಲಕಾಲ ನೆಟ್‌ಫ್ಲಿಕ್ಸ್ ಸರ್ವರ್ ಸಮಸ್ಯೆ ಎದುರಿಸಿತು ಎನ್ನಲಾಗಿದೆ.

ಇದನ್ನೂ ಓದಿ:

ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಜನ ಸಿನಿಮಾ ಬಿಡುಗಡೆಗಾಗಿ ಮೊಬೈಲ್ ಹಿಡಿದು ಕಾಯುತ್ತಿದ್ದರು. ಬಿಡುಗಡೆಯಾದ ತಕ್ಷಣ ಎಲ್ಲರೂ ಒಂದೇ ಸಮಯದಲ್ಲಿ ಸಿನಿಮಾ ನೋಡಲು ಶುರು ಮಾಡಿದರು” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಬಿಡುಗಡೆಯಾದ ಮೊದಲ ಭಾಗಕ್ಕೂ ಪಾಕಿಸ್ತಾನದಲ್ಲಿ ಭಾರೀ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಎರಡನೇ ಭಾಗವೂ ಅದೇ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಸದ್ಯ ವಿದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಸಿನಿಮಾ, ಭಾರತದಲ್ಲಿ ಜೂನ್ 4ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

Must Read