March 21, 2026
Saturday, March 21, 2026
spot_img

CINE | ‘ಧುರಂಧರ್ 2’ ದಾಳಿಗೆ ಬಾಕ್ಸ್ ಆಫೀಸ್ ಧೂಳೀಪಟ: ಎರಡು ದಿನದಲ್ಲೇ 280 ಕೋಟಿ ರೂ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧುರಂಧರ್ 2 ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಎರಡು ದಿನಗಳಲ್ಲಿ ದಾಖಲೆಯ ಮಟ್ಟದ ಗಳಿಕೆ ಸಾಧಿಸಿದೆ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಪ್ರಾರಂಭಿಕ ತಾಂತ್ರಿಕ ತೊಂದರೆಗಳು ಹಾಗೂ ಕೆಲ ಶೋಗಳು ರದ್ದಾದರೂ, ಚಿತ್ರದ ವೇಗ ಕುಂಠಿತವಾಗಿಲ್ಲ. ವರದಿಗಳ ಪ್ರಕಾರ, ಎರಡನೇ ದಿನದ ಅಂತ್ಯದ ವೇಳೆಗೆ ಸಿನಿಮಾ ಸುಮಾರು 97 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಒಟ್ಟು ಕಲೆಕ್ಷನ್ 280 ಕೋಟಿ ರೂಪಾಯಿಗೆ ಸಮೀಪಿಸಿದೆ.

ಇದನ್ನೂ ಓದಿ:

ಚಿತ್ರದ ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಇದು ಹೊಸ ದಾಖಲೆ ಸೃಷ್ಟಿಸಿದೆ. ಇದೇ ವೇಳೆ, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಹಿಂದಿನ ಭಾಗಕ್ಕಿಂತ ಹಲವು ಪಟ್ಟು ಹೆಚ್ಚು ಓಪನಿಂಗ್ ಪಡೆದಿದೆ.

ಹಿಂದಿ ಆವೃತ್ತಿಯೇ ಹೆಚ್ಚಿನ ಆದಾಯ ತಂದುಕೊಟ್ಟಿದ್ದು, ಇತರೆ ಭಾಷೆಗಳಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕಡಿಮೆ ಪ್ರದರ್ಶನ ಕಂಡಿದೆ. ಈ ಬಗ್ಗೆ ನಿರ್ದೇಶಕರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !