August 28, 2026
Friday, August 28, 2026
spot_img

CINE | ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಿದೆ ‘ಧುರಂಧರ್ 2’: ಮೊದಲ ದಿನವೇ 250 ಕೋಟಿ ರೂ ಕ್ಲಬ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧುರಂಧರ್ 2 ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರೀಮಿಯರ್ ಶೋಗಳ ಜೊತೆಗೆ ಮೊದಲ ದಿನದ ಕಲೆಕ್ಷನ್ ಸೇರಿ ಚಿತ್ರವು ಸುಮಾರು 236 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.

ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಅವರ ಅಭಿನಯವೇ ಚಿತ್ರದ ಹೈಲೈಟ್ ಆಗಿದೆ. ಜೊತೆಗೆ ಸಂಜಯ್ ದತ್ ಹಾಗೂ ಅರ್ಜುನ್ ರಾಮ್ ಪಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದಲ್ಲೇ ಚಿತ್ರವು ಸುಮಾರು 172 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ, ವಿದೇಶದಲ್ಲಿ 64 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ನೆಟ್ ಕಲೆಕ್ಷನ್ ಸುಮಾರು 140 ಕೋಟಿ ರೂಪಾಯಿ ಎಂದು ವರದಿಯಾಗಿದೆ. ವಿಶೇಷವಾಗಿ ಹಿಂದಿ ಆವೃತ್ತಿಯೇ ಮೊದಲ ದಿನ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಚಿತ್ರಕ್ಕೆ ದೊಡ್ಡ ಸಾಧನೆ.

ಇದನ್ನೂ ಓದಿ:

ಪ್ರೀಮಿಯರ್ ಶೋಗಳಿಂದಲೇ ಸುಮಾರು 40 ಕೋಟಿ ರೂಪಾಯಿ ಗಳಿಸಿರುವುದು ಚಿತ್ರದ ಆರಂಭಿಕ ಕ್ರೇಜ್‌ನ್ನು ತೋರಿಸುತ್ತದೆ. ದೇಶದಾದ್ಯಂತ ಸುಮಾರು 34 ಸಾವಿರಕ್ಕೂ ಹೆಚ್ಚು ಶೋಗಳು ಸಿಕ್ಕಿರುವುದು ಕೂಡ ವಿಶೇಷ.

ಹಿಂದಿನ ಭಾಗದ ಯಶಸ್ಸು ಈ ಸೀಕ್ವಲ್‌ಗೆ ಹೆಚ್ಚುವರಿ ಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ ಇದೆ. ಈಗಾಗಲೇ 250 ಕೋಟಿ ಗಡಿಯತ್ತ ದಾಪುಗಾಲಿಟ್ಟಿರುವ ಈ ಚಿತ್ರ, ಮುಂದಿನ ದಿನಗಳಲ್ಲಿ 2000 ಕೋಟಿ ಕ್ಲಬ್ ಸೇರುವ ಸಾಧ್ಯತೆಗಳೂ ಕಾಣಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !