ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ನಟನೆಯ ಕಾಟೇರ ಅದ್ಭುತವಾಗಿ ಯಶಸ್ಸು ಕಂಡ ನಂತರ ನಿರ್ದೇಶಕ ತರುಣ್ ಸುಧೀರ್ ಸ್ವಾಮಿ ಕೊರಗಜ್ಜನ ಸನ್ನಿಧಾನವನ್ನು ಭೇಟಿ ಮಾಡಿದ್ದಾರೆ.
ಚಿತ್ರ ಯಶಸ್ವಿಯಾಗಲಿ ಎಂದು ಕೊರಗಜ್ಜನ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದ ಕಾರಣ ಮಂಗಳೂರಿನ ಕೊರಗಜ್ಜನ ದೇವಸ್ಥಾನ ಮಾತ್ರವಲ್ಲದೆ ಧರ್ಮಸ್ಥಳದ ಮಂಜುನಾಥ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದ್ದಾರೆ. ಮುಂದಿನ ತಮ್ಮ ಕಾರ್ಯಗಳಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಕಾಟೇರ ಸಿನಿಮಾ ವರ್ಷದ ಹಿಟ್ ಚಿತ್ರವಾಗಿದ್ದು ವಿವಿಧ ಭಾಷೆಗಳಿಗೆ ಡಬ್ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಈ ನಡುವೆ ತರುಣ್ ಮತ್ತೊಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿರುವ ಕಾರಣ ಅಭಿಮಾನಿಗಳು ಮುಂದಿನ ಚಿತ್ರಕ್ಕೆ ಕಾತುರರಾಗಿದ್ದಾರೆ.