July 26, 2026
Sunday, July 26, 2026
spot_img

CINE | ಕಿಚ್ಚನ ಫ್ಯಾನ್ಸ್‌ಗೆ ಗುಡ್ ನ್ಯೂಸ್: ‘ಬಿಲ್ಲ ರಂಗ ಭಾಷಾ’ ಬಿಗ್ ಅಪ್‌ಡೇಟ್ ಇಲ್ಲಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷಾ’ ಚಿತ್ರದ ಚಿತ್ರೀಕರಣ ಮತ್ತೆ ಚುರುಕುಗೊಂಡಿದೆ. ಹೊಸ ಶೆಡ್ಯೂಲ್ ಆರಂಭವಾಗಿದ್ದು, ಚಿತ್ರದ ನಿರ್ಮಾಣ ಹಾಗೂ ಬಿಡುಗಡೆ ಕುರಿತು ಚಿತ್ರತಂಡ ಮಹತ್ವದ ಮಾಹಿತಿ ಹಂಚಿಕೊಂಡಿದೆ.

40% ಚಿತ್ರೀಕರಣ ಪೂರ್ಣ

ಪ್ರಸ್ತುತ ನಡೆಯುತ್ತಿರುವ ಶೂಟಿಂಗ್ ಮುಗಿದ ಬಳಿಕ ಚಿತ್ರದ ಸುಮಾರು 40 ಶೇಕಡಾ ಭಾಗ ಪೂರ್ಣಗೊಳ್ಳಲಿದೆ. ಉಳಿದ ಚಿತ್ರೀಕರಣವನ್ನು ಈ ವರ್ಷದ ಅಂತ್ಯ ಅಥವಾ 2027ರ ಆರಂಭದಲ್ಲಿ ಮುಗಿಸುವ ಗುರಿ ಚಿತ್ರತಂಡಕ್ಕಿದೆ.

ಇದನ್ನೂ ಓದಿ:

ಸಿಜಿಐ, ವಿಎಫ್‌ಎಕ್ಸ್‌ಗೆ ಹೆಚ್ಚಿನ ಆದ್ಯತೆ

ಚಿತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಜಿಐ ಮತ್ತು ವಿಎಫ್‌ಎಕ್ಸ್ ಬಳಕೆಯಾಗುತ್ತಿರುವ ಕಾರಣ ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಸಾಕಷ್ಟು ಸಮಯ ಮೀಸಲಿಡಲಾಗಿದೆ. ಪ್ರೇಕ್ಷಕರಿಗೆ ಅದ್ಧೂರಿ ದೃಶ್ಯ ಅನುಭವ ನೀಡುವತ್ತ ತಂಡ ಗಮನ ಹರಿಸಿದೆ.

ಎಲ್ಲಾ ಕೆಲಸಗಳು ಯೋಜನೆಯಂತೆ ನಡೆದರೆ, 2027ರ ಅಕ್ಟೋಬರ್‌ನಲ್ಲಿ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಉದ್ದೇಶವಿದೆ.

ನಿರೀಕ್ಷೆ ಹೆಚ್ಚಿಸಿದ ಜೋಡಿ

‘ವಿಕ್ರಾಂತ್ ರೋಣ’ ಬಳಿಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಮತ್ತೊಮ್ಮೆ ಒಂದಾಗಿರುವ ಈ ಫ್ಯಾಂಟಸಿ ಚಿತ್ರ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !