May 25, 2026
Monday, May 25, 2026
spot_img

CINE | ಸೌತ್ ಬೆಡಗಿ ಸಾಯಿ ಪಲ್ಲವಿಗೆ ಬಾಲಿವುಡ್ ಕೈಕೊಟ್ಟಿತಾ? ‘ಏಕ್ ದಿನ್’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ನೈಜ ನಟನೆ ಮತ್ತು ಸರಳತೆಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ, ಈಗ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ ‘ಏಕ್ ದಿನ್’ ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ, ಸೌತ್‌ನಲ್ಲಿ ಲೇಡಿ ಪವರ್ ಸ್ಟಾರ್ ಎನಿಸಿಕೊಂಡಿರುವ ಸಾಯಿ ಪಲ್ಲವಿಗೆ ಬಾಲಿವುಡ್ ಮೊದಲ ದಿನ ಅಷ್ಟೇನು ಅದ್ಭುತ ಸ್ವಾಗತ ನೀಡಿದಂತೆ ಕಾಣುತ್ತಿಲ್ಲ.

ಮೇ 1ರಂದು ಅದ್ಧೂರಿಯಾಗಿ ಬಿಡುಗಡೆಯಾದ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಸದ್ದು ಮಾಡಲು ವಿಫಲವಾಗಿದೆ. ಈ ಚಿತ್ರ ಮೊದಲ ದಿನ ಕೇವಲ 1 ಕೋಟಿ ರೂಪಾಯಿ ಗಳಿಕೆಯನ್ನಷ್ಟೇ ಕಂಡಿದೆ. ದೇಶಾದ್ಯಂತ ಸುಮಾರು 1,710 ಶೋಗಳು ಪ್ರದರ್ಶನಗೊಂಡಿದ್ದರೂ, ಪ್ರೇಕ್ಷಕರ ಸಂಖ್ಯೆ ಮಾತ್ರ ತೀರಾ ವಿರಳವಾಗಿತ್ತು. ಚಿತ್ರಮಂದಿರಗಳಲ್ಲಿ ಕೇವಲ 14% ರಷ್ಟು ಅಕ್ಯುಪೆನ್ಸಿ ದಾಖಲಾಗಿರುವುದು ಚಿತ್ರತಂಡಕ್ಕೆ ತುಸು ನಿರಾಸೆ ಮೂಡಿಸಿದೆ.

ಸುನಿಲ್ ಪಾಂಡೆ ನಿರ್ದೇಶನದ ಈ ಚಿತ್ರವು ಒಂದು ಸುಂದರ ರೊಮ್ಯಾಂಟಿಕ್ ಡ್ರಾಮಾ ಆಗಿದೆ. ಚಿತ್ರದ ಬಹುಪಾಲು ಚಿತ್ರೀಕರಣವನ್ನು ಜಪಾನ್‌ನಲ್ಲಿ ನಡೆಸಲಾಗಿದ್ದು, ಕಥೆಯು ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ದಿನದಲ್ಲಿ ಭೇಟಿಯಾಗಿ ಅವರ ನಡುವೆ ನಡೆಯುವ ವಿದ್ಯಮಾನಗಳ ಸುತ್ತ ಸಾಗುತ್ತದೆ. ಅಮೀರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !