May 23, 2026
Saturday, May 23, 2026
spot_img

CINE | ಜನ ನಾಯಗನ್ ಆಯ್ತು ಈಗ ವಿವಾದದ ಸುಳಿಯಲ್ಲಿ ಮತ್ತೊಂದು ಸಿನಿಮಾ! ಚಿತ್ರ ತಂಡದಿಂದ ಮಾಸ್ಟರ್ ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ರಿಲೀಸ್‌ಗೂ ಮುನ್ನವೇ ಟೈಟಲ್ ಕಾರಣಕ್ಕೆ ವಿವಾದಕ್ಕೆ ಸಿಲುಕಿದ ಬಾಲಿವುಡ್ ಚಿತ್ರವೊಂದು ಈಗ ಮತ್ತೆ ಸುದ್ದಿಯಲ್ಲಿದೆ. ಜನ ನಾಯಗನ್ ಚಿತ್ರ ಸೆನ್ಸಾರ್ ಸಮಸ್ಯೆಯಿಂದ ವಿಳಂಬವಾದ ಬೆನ್ನಲ್ಲೇ, ಮತ್ತೊಂದು ಚಿತ್ರಕ್ಕೂ ರಿಲೀಸ್ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತಕ್ಷಣದ ನಿರ್ಧಾರದಿಂದ ಬಿಡುಗಡೆಗೆ ದಾರಿ ಸುಗಮವಾಗಿದೆ.

ಮನೋಜ್ ಬಾಜ್‌ಪಾಯಿ ಅಭಿನಯದ ‘ಘುಸ್ಕೋರ್ ಪಂಡತ್’ ಚಿತ್ರದ ಶೀರ್ಷಿಕೆ ಧಾರ್ಮಿಕ ಸಮುದಾಯದ ವಿರೋಧಕ್ಕೆ ಕಾರಣವಾಗಿತ್ತು. ಜೈಪುರದ ಸರ್ವ ಬ್ರಾಹ್ಮಿಣ್ ಮಹಸಭಾ ಕೋರ್ಟ್ ಮೆಟ್ಟಿಲೇರಿತ್ತು. ಶೀರ್ಷಿಕೆ ಬದಲಾಯಿಸದಿದ್ದರೆ ಬಿಡುಗಡೆಗೆ ಅವಕಾಶ ನೀಡಬಾರದು ಎಂಬ ಮಾತು ಕೂಡ ಕೇಳಿಬಂದಿತ್ತು.

ಇದನ್ನೂ ಓದಿ:

ಈ ಹಿನ್ನೆಲೆ ನಿರ್ಮಾಪಕರು ವಿವಾದ ತಗ್ಗಿಸಲು ಟೈಟಲ್ ಬದಲಿಸಲು ಒಪ್ಪಿಕೊಂಡಿದ್ದಾರೆ. ಈ ಕುರಿತು ನೆಟ್‌ಫ್ಲಿಕ್ಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಚಿತ್ರ ಬಿಡುಗಡೆಯಿಗೆ ತಾತ್ಕಾಲಿಕ ಅನುಮತಿ ಸಿಕ್ಕಿದೆ. ಆದರೂ, ಬಿಡುಗಡೆಯ ಬಳಿಕ ಮತ್ತಷ್ಟು ವಿರೋಧ ವ್ಯಕ್ತವಾದರೆ ಹೊಸ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !