August 19, 2026
Wednesday, August 19, 2026
spot_img

CINE | ಶುರುವಾಗ್ತಿದೆ ಕಂಗನಾ ಅಭಿನಯದ ಬ್ಲಾಕ್‌ಬಸ್ಟರ್‌ ಸಿನಿಮಾ ಸೀಕ್ವೆಲ್‌: ಆದ್ರೆ ಎದುರಾಯ್ತು 250 ಕೋಟಿ ರೂ. ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಹಾಗೂ ಸಂಸದೆ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ‘ಕ್ವೀನ್ 2’ ಸಿನಿಮಾ ಬಿಡುಗಡೆಯ ಹಂತದಲ್ಲೇ ಕಾನೂನು ವಿವಾದಕ್ಕೆ ಸಿಲುಕಿದೆ.

2014ರಲ್ಲಿ ಸೂಪರ್‌ಹಿಟ್ ಆಗಿದ್ದ ‘ಕ್ವೀನ್’ ಚಿತ್ರದ ಮುಂದುವರಿದ ಭಾಗವಾಗಿ ನಿರ್ಮಾಣವಾಗಿರುವ ಈ ಸಿನಿಮಾ ವಿರುದ್ಧ ₹250 ಕೋಟಿ ಪರಿಹಾರ ಕೋರಿ ದಾವೆ ದಾಖಲಾಗಿದೆ.

ಐಪಿ ಹಕ್ಕು ಉಲ್ಲಂಘನೆ ಆರೋಪ

ಮೂಲ ‘ಕ್ವೀನ್’ ಚಿತ್ರದ ನಿರ್ಮಾಪಕರಾಗಿದ್ದ ಪ್ಯಾಂಟಮ್ ಸ್ಟುಡಿಯೋಸ್, ಹೊಸ ಚಿತ್ರವನ್ನು ತಮ್ಮ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಿದೆ. ಕಥೆ ಮತ್ತು ಬೌದ್ಧಿಕ ಆಸ್ತಿ (Intellectual Property) ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ, ₹250 ಕೋಟಿ ಪರಿಹಾರಕ್ಕೆ ಆಗ್ರಹಿಸಿದೆ.

ಇದನ್ನೂ ಓದಿ:

ಬಿಡುಗಡೆಗೆ ಅನಿಶ್ಚಿತತೆ

ಈ ಬಾರಿ ಜಿಯೋ ಸ್ಟುಡಿಯೋಸ್ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದು, ಮೊದಲ ಭಾಗದ ನಿರ್ದೇಶಕ ವಿಕಾಸ್ ಭಾಲ್ ಕೂಡ ನಿರ್ದೇಶನದಲ್ಲಿ ಕೈಜೋಡಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದರೂ, ಕಾನೂನು ವಿವಾದದಿಂದ ಬಿಡುಗಡೆಯ ಭವಿಷ್ಯ ಪ್ರಶ್ನಾರ್ಥಕವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕಂಗನಾ ನಟಿಸಿದ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ‘ಕ್ವೀನ್ 2’ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈಗ ಈ ಕಾನೂನು ಹೋರಾಟ ಚಿತ್ರದ ಬಿಡುಗಡೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !