May 10, 2026
Sunday, May 10, 2026
spot_img

CINE | ಬಾಕ್ಸ್‌ ಆಫೀಸ್‌ನಲ್ಲಿ ‘ಕೆಡಿ’ ಕೇಕೆ: ಸೋಮವಾರದ ಪರೀಕ್ಷೆಯಲ್ಲೂ ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರಿ ನಿರೀಕ್ಷೆಗಳ ನಡುವೆ ತೆರೆಕಂಡ ‘ಕೆಡಿ’ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬಲವನ್ನು ಸಾಬೀತು ಮಾಡುತ್ತಿದೆ. ಆರಂಭದಲ್ಲಿ ಚಿತ್ರದ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿದ್ದರೂ, ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಧ್ರುವ ಸರ್ಜಾ ನಟನೆಯ ಈ ಆ್ಯಕ್ಷನ್ ಎಂಟರ್‌ಟೈನರ್‌ಗೆ ಕುಟುಂಬ ಪ್ರೇಕ್ಷಕರಿಂದಲೂ ಬೆಂಬಲ ವ್ಯಕ್ತವಾಗಿರುವುದು ವಿಶೇಷ.

ಗುರುವಾರ ಆರಂಭವಾದ ‘ಕೆಡಿ’ ಸಿನಿ ಜಾತ್ರೆ ವಾರಾಂತ್ಯದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೊದಲ ದಿನ ಭರ್ಜರಿ ಆರಂಭ ಕಂಡ ಚಿತ್ರ, ಎರಡನೇ ದಿನವೂ ಅದೇ ಲಯ ಮುಂದುವರಿಸಿದೆ. ಶನಿವಾರ ಮತ್ತು ಭಾನುವಾರ ಉತ್ತಮ ಪ್ರದರ್ಶನ ನೀಡಿದ ಸಿನಿಮಾ, ವಾರದ ಮೊದಲ ಕೆಲಸದ ದಿನವಾದ ಸೋಮವಾರ ಸಿನಿಮಾ 2.93 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ತನ್ನ ಹಿಡಿತ ಕಳೆದುಕೊಳ್ಳದೆ ಗಮನ ಸೆಳೆದಿದೆ. ಸಾಮಾನ್ಯವಾಗಿ ವಾರಾಂತ್ಯದ ಬಳಿಕ ಚಿತ್ರದ ಕಲೆಕ್ಷನ್ ಇಳಿಕೆಯಾಗುವುದು ರೂಢಿ. ಆದರೆ ‘ಕೆಡಿ’ ಆ ಲೆಕ್ಕಾಚಾರವನ್ನು ಬದಲಿಸಿದೆ.

ಇದನ್ನೂ ಓದಿ:

ಮೊದಲ ನಾಲ್ಕು ದಿನಗಳಲ್ಲಿ ಕೋಟಿ ಕೋಟಿ ರೂಪಾಯಿ ಗಳಿಕೆ ದಾಖಲಿಸಿರುವ ಸಿನಿಮಾ, ಸೋಮವಾರವೂ ಬಲಿಷ್ಠ ಸಂಖ್ಯೆಯನ್ನು ದಾಖಲಿಸಿ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಒಟ್ಟಾರೆ ಕಲೆಕ್ಷನ್ ಉತ್ತಮ ಹಾದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿಸಿದೆ.

ಧ್ರುವ ಸರ್ಜಾ ಅಭಿನಯ, ಪ್ರೇಮ್ ನಿರ್ದೇಶನ ಮತ್ತು ಭರ್ಜರಿ ಮೇಕಿಂಗ್ ಚಿತ್ರದ ಪ್ರಮುಖ ಬಲವಾಗಿ ಪರಿಣಮಿಸಿದೆ. ಇದೇ ವೇಗ ಮುಂದುವರಿದರೆ ‘ಕೆಡಿ’ ಈ ವರ್ಷದ ಸೂಪರ್‌ಹಿಟ್ ಪಟ್ಟಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !