ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ನಿರೀಕ್ಷೆಯ ನಡುವೆ ತೆರೆಕಂಡ ಮೈಖಲ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಪ್ರೇಕ್ಷಕರ ಕುತೂಹಲ ಮಾತ್ರ ಕಡಿಮೆಯಾಗಿಲ್ಲ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ಈ ಚಿತ್ರ 220 ಮಿಲಿಯನ್ ಡಾಲರ್‌ಗಿಂತ ಹೆಚ್ಚು, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 2100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿದೆ.
ಪಾಪ್ ಸಂಗೀತದ ದಿಗ್ಗಜ ಮೈಖಲ್ ಜಾಕ್ಸನ್ ಅವರ ಜೀವನ ಕಥೆ ಆಧರಿಸಿದ ಈ ಸಿನಿಮಾದಲ್ಲಿ ಅವರ ಸಂಬಂಧಿ ಜಾಫರ್ ಜಾಕ್ಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಮತ್ತು ಮೈಖಲ್ ಶೈಲಿಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದಿದೆ.
ಇದನ್ನೂ ಓದಿ:
ವಿಮರ್ಶಕರಿಂದ ಕೆಲವು ಟೀಕೆಗಳು ಕೇಳಿಬಂದರೂ, ಅಭಿಮಾನಿಗಳ ಪ್ರೀತಿ ಚಿತ್ರಕ್ಕೆ ದೊಡ್ಡ ಬಲವಾಗಿದೆ. ಭಾರತದಲ್ಲೂ ಉತ್ತಮ ಆರಂಭ ಪಡೆದಿರುವ ಈ ಸಿನಿಮಾ, ಕಠಿಣ ಸ್ಪರ್ಧೆಯ ನಡುವೆಯೂ 25 ಕೋಟಿ ರೂ ಕಲೆಕ್ಷನ್ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಮೈಖಲ್ ಜಾಕ್ಸನ್‌ಗಿರುವ ಅಪಾರ ಅಭಿಮಾನಿ ಬಳಗವೇ ಚಿತ್ರದ ಯಶಸ್ಸಿಗೆ ಪ್ರಮುಖ



