July 9, 2026
Thursday, July 9, 2026
spot_img

CINE | ಬರೋಬ್ಬರಿ 26 ವರ್ಷಗಳ ನಂತರ ಸೌತ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ನಾಸಿರುದ್ಧೀನ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರು ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡುವುದು ಗಣನೀಯವಾಗಿ ಹೆಚ್ಚಾಗಿದೆ. ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಹೃತಿಕ್ ರೋಷನ್ ಅವರಂತಹ ಸೂಪರ್ ಸ್ಟಾರ್‌ಗಳೇ ಈಗಾಗಲೇ ದಕ್ಷಿಣದ ಬೆಳ್ಳಿಪರದೆಯ ಮೇಲೆ ಮಿಂಚಿದ್ದಾರೆ. ಇದೀಗ ಇದೇ ಹಾದಿಯಲ್ಲಿ, ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳೆರಡರಲ್ಲೂ ತಮ್ಮ ಅದ್ಭುತ ನಟನೆಯಿಂದ ಮನೆಮಾತಾಗಿರುವ ಬಾಲಿವುಡ್‌ನ ಹಿರಿಯ ದಿಗ್ಗಜ ನಟ ನಾಸಿರುದ್ಧೀನ್ ಶಾ ಅವರು ಬರೋಬ್ಬರಿ 26 ವರ್ಷಗಳ ಸುದೀರ್ಘ ಬಿಡುವಿನ ನಂತರ ದಕ್ಷಿಣ ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳುತ್ತಿದ್ದಾರೆ.

ಕನ್ನಡದ ಎರಡು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದ ಈ ಹಿರಿಯ ಪ್ರತಿಭೆ, ಕೊನೆಯದಾಗಿ 2000ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಕಮಲ್ ಹಾಸನ್ ಅವರ ‘ಹೇ ರಾಮ್’ ಸಿನಿಮಾದಲ್ಲಿ ಮಹಾತ್ಮಾ ಗಾಂಧೀಜಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತಮಿಳಿನ ‘ಓಂ’ ಚಿತ್ರದಲ್ಲಿ ನಾಸಿರುದ್ಧೀನ್ ಶಾ ಎಂಟ್ರಿ

ಖ್ಯಾತ ನಟ ಧನುಶ್ ನಾಯಕರಾಗಿ ನಟಿಸುತ್ತಿರುವ, ಅತ್ಯಂತ ನಿರೀಕ್ಷಿತ ತಮಿಳು ಆಕ್ಷನ್ ಡ್ರಾಮಾ ‘ಓಂ: ಚಾಪ್ಟರ್ 1’ (Om) ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ನಾಸಿರುದ್ಧೀನ್ ಶಾ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಇತ್ತೀಚೆಗಷ್ಟೇ ಸೂಪರ್ ಹಿಟ್ ‘ಅಮರನ್’ ಸಿನಿಮಾ ನೀಡಿ ಕೀರ್ತಿಗಳಿಸಿದ ನಿರ್ದೇಶಕ ರಾಜಕುಮಾರ್ ಪೆರಿಸ್ವಾಮಿ ಅವರು ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?

ಧನುಶ್ ಅವರ ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ, ನಾಯಕಿಯರಾಗಿ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಟಿಸುತ್ತಿದ್ದಾರೆ. ಕೆಂಪು ಚಂದನ ಸಾಗಣೆಯ ಕಥಾಹಂದರ ಹೊಂದಿರುವ ಈ ಚಿತ್ರವು ಅಕ್ಟೋಬರ್ 16, 2026 ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !