CINE NEWS | RRR ಗೆ ಮತ್ತೊಂದು ಗರಿಮೆ – ʼನಾಟು ನಾಟುʼ ಹಾಡು ಆಸ್ಕರ್‌ ಗೆ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಕ್ಸ್‌ ಆಫೀಸಿನಲ್ಲಿ ಕೊಳ್ಳೆ ಹೊಡೆದಿದ್ದ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ RRR ಚಿತ್ರದ ಸಾಧನೆಗೆ ಈಗ ಮತ್ತೊಂದು ಗರಿಮೆ ಮೂಡಿದೆ. RRR ಚಿತ್ರದ ಫೇಮಸ್‌ ʼನಾಟು ನಾಟುʼ ಹಾಡು 2023ರ ಆಸ್ಕರ್‌ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು RRR ಅಭಿಮಾನಿಗಳು ಮತ್ತೊಮ್ಮೆ ಖುಷಿಯಿಂದ ಸಂಭ್ರಮಿಸುವಂತೆ ಮಾಡಿದೆ.

ಚಿತ್ರದ ʼನಾಟು ನಾಟುʼ ಹಾಡನ್ನ ಅತ್ಯುತ್ತಮ ಹಾಡು ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಒಟ್ಟು 81 ಗಾಡುಗಳಲ್ಲಿ ಆಯ್ಕೆಯಾದ 15 ಹಾಡುಗಳಲ್ಲಿ ಈಗ ʼನಾಟು ನಾಟುʼ ಸೇರಿದೆ. ನಾಟು ನಾಟು ಜೊತೆಗೆ, ಅವತಾರ್: ದಿ ವೇ ಆಫ್ ವಾಟರ್‌ನಿಂದ ‘ನಥಿಂಗ್ ಈಸ್ ಲಾಸ್ಟ್’, ಬ್ಲಾಂಕ್ ಪ್ಯಾಂಥರ್‌ನಿಂದ ‘ಲಿಫ್ಟ್ ಮಿ ಅಪ್’: ವಕಾಂಡಾ ಫಾರೆವರ್ ಮತ್ತು ಟಾಪ್ ಗನ್: ಮೇವರಿಕ್‌ನಿಂದ ‘ಹೋಲ್ಡ್ ಮೈ ಹ್ಯಾಂಡ್’ ಹಾಡುಗಳು ಪಟ್ಟಿಯಲ್ಲಿ ಸೇರಿವೆ.

RRR ಈ ಹಾಡು ಆಸ್ಕರ್‌ಗಾಗಿ ಭಾರತದ ಅಧಿಕೃತ ಪ್ರವೇಶದ ಭಾಗವಾಗಿಲ್ಲ. ಆದರೆ ಆದರೆ 14 ವಿಭಾಗಗಳಲ್ಲಿ ‘ನಿಮ್ಮ ಪರಿಗಣನೆಗಾಗಿ’ ವಿಭಾಗದ ಅಡಿಯಲ್ಲಿ ಪ್ರತ್ಯೇಕವಾಗಿ ಸಲ್ಲಿಸಲ್ಪಟ್ಟಿದೆ. “ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ಚಿತ್ರವನ್ನು ಪ್ರೀತಿಸಿದ ಮತ್ತು ನಮ್ಮನ್ನು ಹುರಿದುಂಬಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ. ನೀವು ಈ ಪ್ರಯಾಣವನ್ನು ಸಾಧ್ಯಗೊಳಿಸಿದ್ದೀರಿ. ನಾವು ಸಾಮಾನ್ಯ ವರ್ಗದಲ್ಲಿ ಆಸ್ಕರ್‌ಗಳನ್ನು ಪರಿಗಣಿಸಲು ಅಕಾಡೆಮಿಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮ RRR ಕುಟುಂಬಕ್ಕೆ ನಾವು ಶುಭ ಹಾರೈಸುತ್ತೇವೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು” ಎಂದು ತಯಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

RRR ಚಿತ್ರದ ʼನಾಟು ನಾಟುʼ ಹಾಡು ಭಾರೀ ಜನಮನ್ನಣೆ ಗಳಿಸಿತ್ತು. ಈ ಹಿಂದೆ ಈ ಹಾಡನ್ನು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿರುವುದಾಗಿ ಘೋಷಿಸಲಾಗಿತ್ತು. ಇದಲ್ಲದೆ, ಚಿತ್ರವು ವಿಮರ್ಶಕರ ಆಯ್ಕೆ ಪ್ರಶಸ್ತಿಗಳಲ್ಲಿ ಐದು ನಾಮನಿರ್ದೇಶನಗಳನ್ನು ಸಹ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!