ಮತ್ತೆ ಮಾಸ್ಕ್ ದಿನಗಳು?- ಸಂಸತ್ತಿನಲ್ಲಿ ಪ್ರಧಾನಿ ಮೋದಿ ನಡೆ ಕೊಡ್ತಿರೋ ಸೂಚನೆ ಏನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಚೀನಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುತ್ತಿರುವ ವರದಿಗಳು ಸಹಜವಾಗಿಯೇ ಭಾರತದಲ್ಲೂ ಮುನ್ನೆಚ್ಚರಿಕೆಯ ಸ್ಥಿತಿಯನ್ನು ಸೃಷ್ಟಿಸಿದೆ. ಭಾರತದ ನಗರಗಳಲ್ಲಿ ಮುಖಗವಸು ಮತ್ತು ಅಂತರ ಕಾಪಾಡಿಕೊಳ್ಳುವ ಪರಿಸ್ಥಿತಿ ದೂರವಾಗಿ ವರ್ಷಗಳೇ ಆಗಿದ್ದವು. ಆದರೀಗ ಮತ್ತೆ ಆ ಸಾರ್ವಜನಿಕ ಬಿಗುಜೀವನ ಮರಳುವುದಾ ಎಂಬ ಪ್ರಶ್ನೆ ಎಬ್ಬಿಸಿರೋದು ಪ್ರಧಾನಿ ನರೇಂದ್ರ ಮೋದಿ ಮತ್ತು ಹೆಚ್ಚಿನ ಸಚಿವರು ಗುರುವಾರ ಸಂಸತ್ತಿನಲ್ಲಿ ಕಾಣಿಸಿಕೊಂಡ ರೀತಿ. ಪ್ರಧಾನಿ ಮೋದಿಯವರಾದಿಯಾಗಿ ಹೆಚ್ಚಿನವರೆಲ್ಲ ಮಾಸ್ಕ್ ಧರಿಸಿಯೇ ಕಲಾಪದಲ್ಲಿ ಕುಳಿತಿದ್ದರೆಂಬುದು ಗಮನಾರ್ಹ.
ಲಸಿಕಾಕರಣ ಹಾಗೂ ಸ್ವಾಭಾವಿಕ ಕಾರಣಗಳೆರಡರಿಂದಲೂ ಭಾರತೀಯರ ರೋಗ ನಿರೋಧಕತೆ ಉತ್ತಮವಾಗಿರುವುದರಿಂದ ರೂಪಾಂತರಿ ಕೋವಿಡ್ ಅಲೆ ಭಾರತದಲ್ಲಿ ದೊಡ್ಡಮಟ್ಟದ ಪರಿಣಾಮವನ್ನೇನೂ ಉಂಟುಮಾಡದು ಎಂದು ಹಲವು ಪರಿಣತರು ಆಶಾಭಾವ ವ್ಯಕ್ತಪಡಿಸಿದ್ದಾರೆ. ಆದರೆ ತಾನು ನಿರ್ವಹಿಸಬೇಕಾದ ಜವಾಬ್ದಾರಿ ಕಾರಣದಿಂದ ಮುಂಬರುವ ದಿನಗಳಲ್ಲಿ ಮತ್ತೆ ಕೆಲವೊಂದಿಷ್ಟು ಕೋವಿಡ್ ನಿಯಮಾವಳಿಗಳನ್ನು ಸರ್ಕಾರ ಜಾರಿಗೆ ತರಲಿದೆಯೇನೋ ಎಂಬ ಸೂಚನೆಯನ್ನು ಸಂಸತ್ತಿನಲ್ಲಿ ಕಾಣುತ್ತಿರುವ ಇದೊಂದು ಚಿತ್ರ ನೀಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!