October 10, 2026
Saturday, October 10, 2026
spot_img

CINE | ರಣವೀರ್ ಸಿಂಗ್ ಅಭಿಮಾನಿಗಳಿಗೆ ವರ್ಷಾಂತ್ಯದೊಳಗೆ ಸಿಗಲಿದೆ ಬಿಗ್ ಸರ್ಪ್ರೈಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ‘ಧುರಂಧರ್’ ಮತ್ತು ‘ಧುರಂಧರ್ 2: ದಿ ರಿವೇಂಜ್’ ಚಿತ್ರಗಳು ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಗಳಿಸಿ ವಿಶ್ವದಾದ್ಯಂತ ದಾಖಲೆ ಬರೆದಿವೆ. ಸದ್ಯ ‘ಧುರಂಧರ್ 2’ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಮೂರನೇ ಭಾಗದ ಬಗ್ಗೆ ಚರ್ಚೆಗಳು ಶುರುವಾಗಿವೆ.

ಜಿಯೋ ಸ್ಟುಡಿಯೋಸ್‌ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಇತ್ತೀಚೆಗೆ ನೀಡಿದ ಸುಳಿವು ಈ ಸುದ್ದಿಗೆ ರೆಕ್ಕೆಪುಕ್ಕ ನೀಡಿದೆ. “ಧುರಂಧರ್ ಸರಣಿ ಇಲ್ಲಿಗೆ ಕೊನೆಯಾಗಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ನಾವು ಪ್ರೇಕ್ಷಕರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಲಿದ್ದೇವೆ. ಪ್ರಸ್ತುತ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ. ಇದು ‘ಧುರಂಧರ್ 3’ ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಎಂಬ ನಂಬಿಕೆಯನ್ನು ಮೂಡಿಸಿದೆ.

ಒಂದೆಡೆ ಚಿತ್ರತಂಡ ಹೊಸ ಅಪ್‌ಡೇಟ್ ಬಗ್ಗೆ ಮಾತನಾಡುತ್ತಿದ್ದರೆ, ಚಿತ್ರದಲ್ಲಿ ‘ಜಮೀಲ್ ಜಮಾಲಿ’ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ರಾಕೇಶ್ ಬೇಡಿ ಮಾತ್ರ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. “ಧುರಂಧರ್ ಒಂದು ದೊಡ್ಡ ಫ್ರಾಂಚೈಸಿ ಎಂಬುದು ನಿಜ. ಇದನ್ನು ಬೇರೆ ನಟರೊಂದಿಗೆ ಮುಂದುವರಿಸಬಹುದು. ಆದರೆ ಪ್ರಸ್ತುತ ಕಥೆ ಎರಡನೇ ಭಾಗಕ್ಕೆ ಮುಗಿದಿದೆ ಎಂದು ನನಗನ್ನಿಸುತ್ತದೆ. ಮೂರನೇ ಭಾಗ ಬರಲಿರುವ ಬಗ್ಗೆ ನನಗೆ ಅಷ್ಟೊಂದು ನಂಬಿಕೆಯಿಲ್ಲ,” ಎಂದು ಅವರು ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಸಣ್ಣ ಮಟ್ಟಿನ ಗೊಂದಲ ಸೃಷ್ಟಿಸಿದ್ದರೂ, ನಿರ್ಮಾಪಕರ ಮಾತುಗಳು ಹೊಸ ಆಶಾವಾದ ಮೂಡಿಸಿವೆ.

Must Read