October 10, 2026
Saturday, October 10, 2026
spot_img

CINE | ರಣವೀರ್ ಸಿಂಗ್ FWICE ವಿವಾದ: 300 ಕೋಟಿಯ ‘ಪ್ರಳಯ್’ ಸಿನಿಮಾ ಶೂಟಿಂಗ್ ನಿಲ್ಲುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಹಾಗೂ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ನಡುವಿನ ಸಂಘರ್ಷ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ‘ಡಾನ್ 3’ ಸಿನಿಮಾದಿಂದ ರಣವೀರ್ ದಿಢೀರ್ ಹೊರನಡೆದ ಕಾರಣಕ್ಕೆ ಮೇ 25 ರಂದು FWICE ಅವರ ವಿರುದ್ಧ ‘ಅಸಹಕಾರ’ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ನಟನ ಬಹುನಿರೀಕ್ಷಿತ 300 ಕೋಟಿ ರೂಪಾಯಿ ಬಜೆಟ್‌ನ ಜಾಂಬಿ ಥ್ರಿಲ್ಲರ್ ಚಿತ್ರ ‘ಪ್ರಳಯ್’ ಶೂಟಿಂಗ್ ವಿಳಂಬವಾಗಲಿದೆಯೇ ಎಂಬ ಆತಂಕ ಮೂಡಿದೆ.

ಸಿನಿಮಾ ತಜ್ಞರ ಪ್ರಕಾರ, FWICE ಆದೇಶದಿಂದ ‘ಪ್ರಳಯ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಸದ್ಯ ಸ್ಕ್ರಿಪ್ಟ್ ರೈಟಿಂಗ್, ವಿಎಫ್‌ಎಕ್ಸ್ ಪ್ಲಾನಿಂಗ್, ಲೊಕೇಶನ್ ಹಂಟಿಂಗ್ ಮತ್ತು ಡಿಸೈನಿಂಗ್ ಕೆಲಸಗಳು ಎಂದಿನಂತೆ ಸಾಗುತ್ತಿವೆ. ಚಿತ್ರದ ಚಿತ್ರೀಕರಣವನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಬಾಲಿವುಡ್‌ನ ಬಹುದೊಡ್ಡ ಜಾಂಬಿ ಸಿನಿಮಾ:

‘ಪ್ರಳಯ್’ ಬಾಲಿವುಡ್‌ನಲ್ಲೇ ಅತ್ಯಂತ ವಿಶಿಷ್ಟವಾದ ಪೋಸ್ಟ್-ಅಪೋಕಲಿಪ್ಟಿಕ್ ಜಾಂಬಿ ಸರ್ವೈವಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಈ ಬಿಗ್ ಬಜೆಟ್ ಚಿತ್ರಕ್ಕಾಗಿ ರಣವೀರ್ ಸಿಂಗ್ ಸಂಪೂರ್ಣ ಡಿಫರೆಂಟ್ ಮೇಕ್ ಓವರ್ ಹಾಗೂ ಶಾಕಿಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಗ್ ಬ್ಯಾನರ್ಸ್ ಒಕ್ಕೂಟ:

ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಪುತ್ರ ಜೈ ಮೆಹ್ತಾ ಈ ಚಿತ್ರದ ಮೂಲಕ ಬಾಲಿವುಡ್‌ಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವನ್ನು ಹನ್ಸಲ್ ಮೆಹ್ತಾ ಅವರ ‘ಟ್ರೂ ಸ್ಟೋರಿ ಫಿಲ್ಮ್ಸ್’,ರಣವೀರ್ ಸಿಂಗ್ ಅವರ ‘ಮಾ ಕಸಂ ಫಿಲ್ಮ್ಸ್’ ಮತ್ತು ‘ಅಪ್ಲಾಸ್ ಎಂಟರ್‌ಟೈನ್‌ಮೆಂಟ್’ ಜಂಟಿಯಾಗಿ ಭಾರಿ ವೆಚ್ಚದಲ್ಲಿ ನಿರ್ಮಿಸುತ್ತಿವೆ.

Must Read