June 30, 2026
Tuesday, June 30, 2026
spot_img

CINE | ಸಮಂತಾ ಆ್ಯಕ್ಷನ್ ಅವತಾರದಲ್ಲಿ ‘ಮಾ ಇಂಟಿ ಬಂಗಾರಂ’ ಅಬ್ಬರ: ಸ್ಯಾಮ್ ಬೇಬಿ ನೋಡಿ ಫ್ಯಾನ್ಸ್ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ರುತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಕಥೆಯಾದರೂ, ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ಗಳು ಪ್ರಮುಖ ಆಕರ್ಷಣೆಯಾಗಿವೆ. ದೂದ್ ಪೇಡ ದಿಗಂತ್ ಸಮಂತಾ ಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೃಹಿಣಿಯಲ್ಲೊಬ್ಬಳು ಯೋಧ

ಟ್ರೈಲರ್‌ನಲ್ಲಿ ಸಮಂತಾ ಸಾಮಾನ್ಯ ಗೃಹಿಣಿಯಂತೆ ಕಾಣಿಸಿಕೊಂಡರೂ, ಅವರ ಹಿಂದಿನ ಭೂಗತ ಲೋಕದ ಶಕ್ತಿಶಾಲಿ ವ್ಯಕ್ತಿತ್ವ ಹೊರಬರುತ್ತದೆ. ಗನ್ ಹಿಡಿದು ಎದುರಾಳಿಗಳನ್ನು ಎದುರಿಸುವ ದೃಶ್ಯಗಳು ಟ್ರೈಲರ್‌ಗೆ ತೀವ್ರತೆ ನೀಡಿವೆ.

ಇದನ್ನೂ ಓದಿ:

ಕುಟುಂಬ ರಕ್ಷಣೆ ಸುತ್ತ ಸುತ್ತುವ ಕಥೆ

ಸಮಂತಾ ಅವರ ಹಿಂದಿನ ಜೀವನ ಮತ್ತೆ ಎದುರಾಗುತ್ತದೆ ಮತ್ತು ಅವರ ಮನೆಯ ಮೇಲೆ ದಾಳಿ ನಡೆಯುತ್ತದೆ. ಆ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಲು ಅವರು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ತಿರುವು.

ಬಿಡುಗಡೆ ದಿನಾಂಕ ಬದಲಾವಣೆ: ನಿರ್ಮಾಣವೂ ಸಮಂತಾ ಕೈಯಲ್ಲಿ

ಚಿತ್ರ ಮೊದಲು ಮೇ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಜೂನ್ 19ಕ್ಕೆ ಮುಂದೂಡಲಾಗಿದೆ. ಚಿತ್ರವನ್ನು ಸಮಂತಾ ತಮ್ಮ Tralala Moving Pictures ಅಡಿಯಲ್ಲಿ ನಿರ್ಮಿಸಿದ್ದಾರೆ. ನಿರ್ದೇಶನವನ್ನು ಬಿ.ವಿ. ನಂದಿನಿ ರೆಡ್ಡಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !