CINE | ಗಣ್ಯರ ಮುಂದೆ ರಾಮ್​ ಚರಣ್ ​ಗೆ ಅವಮಾನ? ಶಾರುಖ್​ ಖಾನ್ ಈ ರೀತಿ ಮಾಡಿದ್ದು ತಪ್ಪು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಂತ್ ಅಂಬಾನಿ ಅವರ ಪ್ರಿ-ವೆಡ್ಡಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಮೇಕಪ್ ಆರ್ಟಿಸ್ಟ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಅಂಬಾನಿ ಪುತ್ರನ ಅದ್ಧೂರಿ ಸಮಾರಂಭವು ಗುಜರಾತ್‌ನ ಜಾಮ್ನಾನಗರದಲ್ಲಿ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯಕ್ತಿಗಳು, ತಾರೆಯರು ಮತ್ತು ಕ್ರಿಕೆಟಿಗರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡಾನ್ಸ್ ಮಾಡುತ್ತಿದ್ದ ಶಾರುಖ್ ಖಾನ್ ಮೈಕ್‌ನಲ್ಲಿ ರಾಮ್ ಚರಣ್ ಅವರನ್ನ ಕರೆಯುತ್ತಿರುತ್ತಾರೆ. ರಾಮ್​ ಚರಣ್ ಎಲ್ಲಿದಿಯಾ? ಎಂದು ಮೊದಲು ತಮಿಳಿನಲ್ಲಿ ಕರೆದು ಮಾತು ಮುಂದುವರೆಸಿದ ಶಾರುಕ್​, ಸಾಪಡಾ ದಾ, ಸೋಕ್ಯಾಮಾ, ರೊಂಡ್​ ಇಡ್ಲಿ(ಎರಡು ಇಡ್ಲಿ) ರಾಮ್ ಚರಣ್ ಎಂದು ಕರೆದಿದ್ದಾರೆ.

ಒಬ್ಬ ಸ್ಟಾರ್ ನಟನನ್ನು ಈ ರೀತಿಯಾಗಿ ಅವಮಾನಿಸಿದಕ್ಕೆ ಬೇಸರಗೊಂಡ ಮೇಕಪ್ ಕಲಾವಿದ ಜೆಬಾ ಹಸನ್, ಮದುವೆಯ ಸಮಾರಂಭವನ್ನು ಮಧ್ಯದಲ್ಲಿಯೇ ಬಿಟ್ಟು ಹೊರನಡೆದಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡು ಶಾರುಖ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!