October 9, 2026
Friday, October 9, 2026
spot_img

CINE | ಕೊನೆಗೂ ಫಿಕ್ಸ್ ಆಯ್ತು ನಿತೇಶ್ ತಿವಾರಿ ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿರುವ, ಪ್ರಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ರಾಮಾಯಣ’ ಕುರಿತು ಬಹುದೊಡ್ಡ ಅಪ್ಡೇಟ್‌ವೊಂದು ಹೊರಬಿದ್ದಿದೆ. ಚಿತ್ರದ ಭವ್ಯ ನೋಟವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ದಿನಾಂಕವನ್ನು ಅಂತಿಮಗೊಳಿಸಿದ್ದು, ಇದೇ ಜುಲೈ 24ರಂದು ಬಹುನಿರೀಕ್ಷಿತ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಸಿನಿಮಾ ಪ್ರಿಯರಲ್ಲಿ ಹೆಚ್ಚಿದ ಕಾತರ

ದೃಶ್ಯ ವೈಭವ ಹಾಗೂ ಅದ್ಭುತ ತಾರಾಗಣದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಪೌರಾಣಿಕ ಸಿನಿಮಾದ ಝಲಕ್ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈಗ ಟ್ರೇಲರ್ ಬಿಡುಗಡೆಯ ಅಧಿಕೃತ ದಿನಾಂಕ ನಿಗದಿಯಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಜುಲೈ 24 ರಂದು ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಬರೆಯಲು ‘ರಾಮಾಯಣ’ ಸಜ್ಜಾಗಿದೆ.

Must Read