ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ಆಸ್ಕರ್ ಪ್ರಶಸ್ತಿ ಬಗ್ಗೆ ಪ್ರತಿಯೊಬ್ಬ ನಟ ನಟಿಯರಿಗೆ ಒಂದು ರೀತಿಯ ಸೆಳೆತ ಇದ್ದೇ ಇದೆ. 2023 ರಲ್ಲಿ ಭಾರತದ ಟ್ರಿಪಲ್ ಆರ್ ಚಿತ್ರ ಸದ್ದು ಮಾಡಿತ್ತು. ಈ ವರ್ಷ ಬಾಲಿವುಡ್ ನ ಅನುಜಾ ಚಲನಚಿತ್ರ ಸ್ಪರ್ಧೆಯಲ್ಲಿತ್ತು. ಆದರೆ ಈ ಸಲ ಆಸ್ಕರ್ ಲಕ್ ಹೊಡೆದಿಲ್ಲ.
ಅಮೆರಿಕದ ಲಾಸ್ ಏಂಜಲೀಸ್‌ನ ಗಾಲ್ಭಿ ಥಿಯೇನಲ್ಲಿ 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯಲ್ಲಿ 23 ವಿಭಾಗಗಳಿವೆ. ಬಾಲಿವುಡ್ ನಿಂದ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಅನುಜಾ ಚಿತ್ರ ಒಂದೇ ಆಸ್ಕರ್‌ಗೆ ಎಂಟ್ರಿ ಕೊಟ್ಟಿತ್ತು.
ಇದು ಬೆಸ್ಟ್ ಲೈವ್ ಆ್ಯಕ್ಷನ್ ಫಿಲ್ಮಂ ವಿಭಾಗದಲ್ಲಿ ಆಯ್ಕೆ ಗೊಂಡಿತ್ತು. ಆದರೆ, ಈ ಚಿತ್ರಕ್ಕೆ ಪ್ರಶಸ್ತಿ ಸಿಗಲಿಲ್ಲ. ಬದಲಾಗಿ ಇದೇ ರೇಸ್ ನಲ್ಲಿದ್ದ ‘ಐ ಆಮ್ ನಾಟ್ ಎ ರೋಬೋಟ್’ ಗೆದ್ದುಕೊಂಡಿದೆ.
ಆಡಮ್ ಜೆ. ಗ್ರೇವ್ಸ್ ಡೈರೆಕ್ಷನ್ ಮಾಡಿದ ಅನುಜಾ ಚಿತ್ರದಲ್ಲಿ 9 ವರ್ಷದ ಹುಡುಗಿಯ ಕಥೆ ಇದೆ. ಈ ಚಿತ್ರ 2024 ರ ಆಗಸ್ಟ್-17 ರಂದು ರಿಲೀಸ್ ಆಗಿತ್ತು.