ಆ ನಿರ್ದೇಶಕನ ಇಂದಿನ ಸ್ಥಿತಿಗೆ ವಿಜಯ್ ದೇವರಕೊಂಡ ಕಾರಣ: ಬಾಲಿವುಡ್‌ನಲ್ಲೂ ಇದೇ ಟಾಪಿಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು  ಹುಟ್ಟುಹಾಕಿತ್ತು. ವಿಜಯ್ ದೇವರಕೊಂಡ ಆಡಿದ ಮಾತು, ಪ್ರಮೋಷನ್‌ ಇದೆಲ್ಲಾ ನೋಡಿದ್ರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತೆ ಎಂಬ ಆತ್ಮವಿಶ್ವಾಸ ಇತ್ತು.

ಸಿನಿಮಾ ರಿಲೀಸ್ ಆದ ನಂತರ ವಿಜಯ್ ಮಾತಾಡಿದ್ದರಲ್ಲಿ ಹತ್ತು ಪರ್ಸೆಂಟ್ ಕೂಡ ಎಫರ್ಟ್ ಇಲ್ಲದೇ ಸಿನಿಮಾ ಮಕಾಡೆ ಮಲಗಿದೆ. ವಿಜಯ್ ವರ್ತನೆಯೇ ಸಿನಿಮಾ ಪ್ಲಾಫ್‌ಗೆ ಕಾರಣ ಅಂತಿದಾರೆ ಪ್ರೇಕ್ಷಕರು. ಸದ್ಯ, ಲೈಗರ್ ವಿತರಕರು ಮತ್ತು ಪ್ರದರ್ಶಕರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ, ತಮ್ಮ ನಷ್ಟವನ್ನು ಸರಿದೂಗಿಸುವಂತೆ ಪೂರಿ ಜಗನ್ನಾಥ್ ಸುತ್ತ ಸುತ್ತುತ್ತಿದ್ದಾರೆ. ಅವರ ಮನೆ ಮುಂದೆ ಧರಣಿ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಎಲ್ಲರಿಗೂ ಸ್ಟ್ರಾಂಗ್‌ ವಾರ್ನಿಂಗ್‌ ಕೊಟ್ಟ ಪೂರಿ ಜಗನ್ನಾಥ್‌ ವಿರುದ್ಧ ಪೊಲೀಸ್‌ ಕೇಸ್‌ ದಾಖಲಾಗಿದೆ. ಈ ಸಿನಿಮಾಗೆ ಕರಣ್ ಜೋಹರ್ ನಿರ್ಮಾಪಕರಾಗಿ ಹಿಂದಿಯಲ್ಲೂ ರಿಲೀಸ್‌ ಮಾಡಲಾಯಿತು. ಹಾಗಾಗಿ ಬಾಲಿವುಡ್ ನಲ್ಲಿ ಕೂಡಾ ಈ ಸಿನಿಮಾ ಚರ್ಚೆಗೆ ಗ್ರಾಸವಾಗಿದೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿನಿಮಾ ರಿಲೀಸ್ ವೇಳೆ ಅತಿಯಾಗಿ ಮಾತನಾಡಿದ ವಿಜಯ್ ದೇವರಕೊಂಡ ಈಗ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ವಿಜಯ್ ಬಗ್ಗೆ ಹಲವರು ಸೀರಿಯಸ್ ಆಗಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್ ಇಂಡಸ್ಟ್ರಿಯ ಮಂದಿ ಲೈಗರ್ ಚಿತ್ರದ ಸೋಲಿನಲ್ಲಿ ವಿಜಯ್ ಅವರ ಪಾಲೂ ಇತ್ತು. ವಿಜಯ್ ಅವರ ದುರಹಂಕಾರದ ವರ್ತನೆ, ಅತಿಯಾದ ಆತ್ಮವಿಶ್ವಾಸ, ಮಾತುಗಳೇ ಇದಕ್ಕೆಲ್ಲಾ ಕಾರಣ. ಪೂರಿ ಜಗನ್ನಾಥ್ ಅವರ ಇಂದಿನ ಪರಿಸ್ಥಿತಿಗೆ ವಿಜಯ್‌ ದೇವರಕೊಂಡ ವರ್ತನೆಯೇ ಕಾರಣ ಹಾಗಾಗಿ ವಿಜಯ್ ಕೂಡ ಹಣ ವಾಪಸ್ ನೀಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!