4 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಸಿಸ್ಕೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾರ್ಪೋರೇಟ್‌ ವಲಯದಲ್ಲಿ ಉದ್ಯೋಗಕಡಿತ ಪರ್ವವು ಮುಂದುವರೆದಿದೆ. ಅಮೇಜಾನ್‌, ಮೆಟಾ, ಟ್ವೀಟರ್‌ ಮುಂತಾದ ದಿಗ್ಗಜ ಕಂಪನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಈಗ ಇದೇ ಸಾಲಿಗೆ ಇನ್ನೊಂದು ನೆಟ್ವರ್ಕಿಂಗ್‌ ದೈತ್ಯ ಸಿಸ್ಕೋ ಕೂಡ ಸೇರಿಕೊಂಡಿದ್ದು ನಾಲ್ಕು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊರಹಾಕಲು ಚಿಂತಿಸುತ್ತಿದೆ.

ತನ್ನ ಮರುಸಮತೋಲನ ಕಾಯಿದೆಯ ಅಡಿಯಲ್ಲಿ ಶೇ.5 ರಷ್ಟು ಉದ್ಯೋಗಿಗಳನ್ನು ಹೊರಹಾಕಲು ಸಿಸ್ಕೋ ಮುಂದಾಗಿದೆ. ಜಾಗತಿಕವಾಗಿ 83,000 ದಷ್ಟು ಉದ್ಯೋಗಿಗಳನ್ನು ಹೊಂದಿರುವ ಸಿಸ್ಕೋದಲ್ಲಿ ಈ ಕ್ರಮವು ಸರಿಸುಮಾರು 4,100 ಉದ್ಯೋಗಗಳನ್ನು ಕಡಿತಗೊಳಿಸುತ್ತದೆ ಎನ್ನಲಾಗಿದೆ.

ಈ ವಾರದ ತನ್ನ ಮೊದಲ ತ್ರೈಮಾಸಿಕ ಗಳಿಕೆಯ ವರದಿಯಲ್ಲಿ ಸಿಸ್ಕೋ 13.6 ಶತಕೋಟಿ ಡಾಲರ್ ಆದಾಯವನ್ನು ವರದಿ ಮಾಡಿದೆ, ಇದು ವರ್ಷದಿಂದ ವರ್ಷಕ್ಕೆ 6 ಶೇಕಡಾ ಹೆಚ್ಚಾಗಿದೆ.

ಸಿಸ್ಕೋ ಅಧ್ಯಕ್ಷ ಮತ್ತು CEO ಚಕ್ ರಾಬಿನ್ಸ್, ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಇನ್ನೂ ಈ ನಿರ್ಧಾರ ಜಾರಿಗೆ ಬಂದಿಲ್ಲ. ಇದು ವೆಚ್ಚ ಕಡಿಮೆ ಮಾಡಲು ಕಡಿತಗೊಳಿಸುತ್ತಿರುವುದಲ್ಲ. ಬದಲಾಗಿ ಕೌಶಲ್ಯಗಳ ಆಧಾರಮೇಲೆ ಮರುಹೊಂದಾಣಿಕೆಯಾಗಿದೆ ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!