ಪ್ರತೀಕಾರ ತೀರಿಸಿಕೊಳ್ಳುತ್ತಿರುವ ರಷ್ಯಾ: ಉಕ್ರೇನ್‌ನಲ್ಲಿ ಕಂಡಕಂಡಲ್ಲಿ ಸ್ಪೋಟ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಸೇನೆ ಉಕ್ರೇನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವಾರು ನಗರಗಳಲ್ಲಿ ಎಲ್ಲೆಂದರಲ್ಲಿ ಸ್ಫೋಟಗಳು ಸಂಭವಿಸುತ್ತಿವೆ. ರಷ್ಯಾವನ್ನು ಕ್ರಿಮಿಯಾ ಸಂಪರ್ಕ ಸೇತುವೆ ಕುಸಿದಿದ್ದು,ಈ ಘಟನೆಯಿಂದ ತೀವ್ರ ಕೋಪಗೊಂಡಿರುವ ರಷ್ಯಾ, ಉಕ್ರೇನ್ ಮೇಲಿನ ದಾಳಿಯನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ ಶನಿವಾರ ತಡರಾತ್ರಿಯಿಂದ ಸರಣಿ ಸ್ಪೋಟ ನಡೆದಿದೆ.  ಈ ಘಟನೆಯಲ್ಲಿ 12 ನಾಗರಿಕರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇಂದು ಸೋಮವಾರ ಬೆಳಿಗ್ಗೆ ಉಕ್ರೇನ್‌ನ ರಾಜಧಾನಿ ಕೀವ್ ನಗರದ ಮಧ್ಯಭಾಗದಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ 8.15ಕ್ಕೆ ಭಾರೀ ಸ್ಫೋಟ ಸಂಭವಿಸಿವೆ. ಸ್ಫೋಟಕ್ಕೂ ಒಂದು ಗಂಟೆ ಮೊದಲು ಉಕ್ರೇನ್ ರಾಜಧಾನಿಯಲ್ಲಿ ವಾಯುದಾಳಿ ಸೈರನ್ ಮೊಳಗಿತ್ತು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಂದು ಬೆಳಿಗ್ಗೆ ಕೀವ್ ಮೇಲೆ ಕ್ಷಿಪಣಿ ದಾಳಿಯ ಪರಿಣಾಮವಾಗಿ ಎಂಟು ನಾಗರಿಕರು ಸಾವನ್ನಪ್ಪಿ, 24 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ಸಚಿವರ ಸಹಾಯಕರು ತಿಳಿಸಿದ್ದಾರೆ. ದಾಳಿಯ ನಂತರ ಆರು ಕಾರುಗಳು ಬೆಂಕಿಗೆ ಆಹುತಿಯಾಗಿವೆ ಮತ್ತು 15 ವಾಹನಗಳಿಗೆ ಹಾನಿಯಾಗಿದೆ ಎಂದು ರೊಸ್ಟಿಸ್ಲಾವ್ ಸ್ಮಿರ್ನೋವ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಲೈವ್, ಟೆರ್ನೋಪಿಲ್, ಖ್ಮೆಲ್ನಿಟ್ಸ್ಕಿ, ಝೈಟೊಮಿರ್ ಮತ್ತು ಕ್ರೊಪಿವ್ನಿಟ್ಸ್ಕಿಯಲ್ಲಿ ಸ್ಫೋಟಗಳು ವರದಿಯಾಗಿವೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!