Wednesday, November 30, 2022

Latest Posts

ಆಗುಂಬೆ ಘಾಟಿಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷರ ಕಾರು ಅಪಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಸಿಐಟಿಯು ರಾಜ್ಯಾಧ್ಯಕ್ಷ ವರಲಕ್ಷ್ಮಿ ಅವರ ಕಾರು ಆಗುಂಬೆ ಪರಿಸರದಲ್ಲಿ ಅಪಘಾತಕ್ಕೀಡಾಗಿದೆ. ಕುಂದಾಪುರದಿಂದ ಹಾಸನ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕುಂದಾಪುರದಲ್ಲಿ ನಡೆದ 15ನೇ ರಾಜ್ಯ ಸಮ್ಮೇಳನ ಮುಗಿಸಿ ಅವರು ಹಾಸನದತ್ತ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪ್ರಾಥಮಿಕ‌ ಮಾಹಿತಿಗಳ ಪ್ರಕಾರ ಜಯಪುರದಿಂದ ಆಲ್ದೂರಿಗೆ ಐದು ಕಿಮೀ ದೂರ ಇರುವ ಸ್ಥಳದಲ್ಲಿ ಕಾರು ಸುಮಾರು 50 ಅಡಿ ಪ್ರಪಾತಕ್ಕೆ ಇಳಿದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!