ಹೊಸದಿಗಂತ ವರದಿ ಮಡಿಕೇರಿ:
ಬೆಂಗಳೂರಿನ ಆರ್ಮಿ ಹೆಡ್ ಕ್ವಾಟರ್ಸ್ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಗ್ಯಾಲಂಟರಿ ಅವಾರ್ಡಿ ಯೋಧರಿಗೆ ಹಾಗೂ ನಾಗರಿಕ ಸೇವೆಗಾಗಿ ಕೆಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿ ರಾಜಭವನದಲ್ಲಿ ಜರುಗಿದ ಸಮಾರಂಭದಲ್ಲಿ ಕೊಡಗಿನವರಾದ ಕಡೇಮಾಡ ಲೀಲೇಶ್ ಅವರ ಪತ್ನಿ ದಿವ್ಯಾ ಲೀಲೇಶ್ (ತಾಮನೆ ಮಾನಿಪಂಡ) ಅವರು ನಾಗರಿಕ ಸೇವೆಗಾಗಿ ಪ್ರಶಸ್ತಿ ಪಡೆದುಕೊಂಡರು.
ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತರಾದ 35 ಯೋಧರು ಹಾಗೂ 9 ನಾಗರಿಕರಿಗೆ ಪ್ರಶಸ್ತಿ ನೀಡಲಾಯಿತು.
ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.