CINE | ಲೈಟ್‌ಬಾಯ್‌ ಕೈಲಿ ʼಟಾಕ್ಸಿಕ್‌ʼಗೆ ಕ್ಲಾಪ್‌, ಸರಳವಾಗಿ ನಡೀತು ಯಶ್‌ ಹೊಸ ಸಿನಿಮಾ ಮಹೂರ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಯಶ್‌ ಹೊಸ ಸಿನಿಮಾ ಅನೌನ್ಸ್‌ ಆಗಿದ್ದು, ಟಾಕ್ಸಿಕ್‌ಗೆ ಇಂದು ಮಹೂರ್ತ ನಡೆದಿದೆ. ಈ ಸಮಾರಂಭಕ್ಕೆ ಯಾವುದೇ ವಿಐಪಿಗಳಿಗೆ ಆಹ್ವಾನ ನೀಡಿಲ್ಲ. ಬದಲಾಗಿ ಸರಳವಾಗಿ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಟಾಕ್ಸಿಕ್‌ ಚಿತ್ರತಂಡ ಮಾತ್ರ ಮಹೂರ್ತಕ್ಕೆ ಹಾಜರಾಗಿದೆ.

ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕಿ ಗೀತು ಮೋಹನ್​ದಾಸ್ ಸಹ ಭಾಗಿಯಾಗಿದ್ದರು. ಗೀತು ಮೋಹನ್​ದಾಸ್ ಪತಿ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳನ್ನು ಮುಹೂರ್ತಕ್ಕೆ ಆಹ್ವಾನಿಸಲಾಗಿಲ್ಲ. ಬದಲಿಗೆ ಸರಳವಾಗಿ ಸಿನಿಮಾದ ಲೈಟ್​ ಬಾಯ್​ಯಿಂದ ಸಿನಿಮಾಕ್ಕೆ ಕ್ಲಾಪ್ ಮಾಡಿಸಲಾಗಿದೆ. ನೆಲಮಂಗಲ ರಸ್ತೆಯಲ್ಲಿರುವ ಎಚ್​ಎಂಟಿ ಕಾರ್ಖಾನೆ ಬಳಿ ಹಾಕಲಾಗಿರುವ ಬೃಹತ್ ಸೆಟ್​ನಲ್ಲಿ ಸಿನಿಮಾದ ಮುಹೂರ್ತ ನಡೆಸಲಾಗಿದ್ದು, ಸ್ವತಃ ಯಶ್, ನಿರ್ಮಾಪಕರು ಹಾಗೂ ಇನ್ನೂ ಕೆಲವರು ದೇವರಿಗೆ ಪೂಜೆ ಮಾಡುವ ಮೂಲಕ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!