ಬಿಜೆಪಿಯ ʻನಬಣ್ಣ ಅಭಿಯಾನʼಕ್ಕೆ ಪಶ್ಚಿಮ ಬಂಗಾಳ ಪೊಲೀಸರಿಂದ ಅಡ್ಡಿ: ಹಲವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳದ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಭಾರತೀಯ ಜನತಾ ಪಕ್ಷ ‘ನಬಣ್ಣ ಅಭಿಯಾನ’ (ಸೆಕ್ರೆಟರಿಯೇಟ್) ಕೈಗೊಂಡಿತ್ತು. ಸೆಕ್ರೆಟರಿಯೇಟ್ ಮುತ್ತಿಗೆಗೆ ರಾಜ್ಯದೆಲ್ಲೆಡೆಯಿಂದ ಬರುತ್ತಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪಶ್ಚಿಮ ಬಂಗಾಳ ಪೊಲೀಸರು ರಾಜಧಾನಿ ಕೋಲ್ಕತ್ತಾ ಪ್ರವೇಶಿಸುವ ಮುನ್ನವೇ ತಡೆದಿದ್ದಾರೆ. ಈ ವೇಳೆ ಪೊಲೀಸರ ಸೆಡ್ಡುಹೊಡೆದು ಮುಂದೆ ಸಾಗಲು ಪ್ರಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ  ಘರ್ಷಣೆಯ ವಾತಾವರಣ ನಿರ್ಮಾಣವಾಗಿ ಸ್ಥಳದಲ್ಲಿ ತಳ್ಳಾಟ ನೂಕಾಟ ಉಂಟಾಯಿತು.

ಸೆಕ್ರಟೇರಿಯಟ್ ಸಮೀಪದ ಪ್ರದೇಶಗಳು ಸೇರಿದಂತೆ ನಗರದ ಹಲೆಡೆ ಬ್ಯಾರಿಕೇಡ್‌ ಅಳವಡಿಸಿ ಬಿಜೆಪಿ ಕಾರ್ಯಕರ್ತರಿಗೆ ಅಡ್ಡಯನ್ನುಂಟು ಮಾಡಿದರು. ರಾಣಿಗಂಜ್ ರೈಲ್ವೆ ಸ್ಟೇಷನ್ ಆವರಣದಲ್ಲಿ ಪರಿಸ್ಥಿತಿ ಕೈಮೀರಿ ಪೊಲೀಸರು, ಬಿಜೆಪಿ ಕಾರ್ಯಕರ್ತರು ಘರ್ಷನೆ ಹೆಚ್ಚಾಯಿತು. ಈ ಸಮಯದಲ್ಲಿ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ದುರ್ಗಾಪುರ ರೈಲ್ವೆ ನಿಲ್ದಾಣದಲ್ಲಿ ಸಹ 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಶಾಂತಿಯುತವಾಗಿ ನಡೆಯುತ್ತಿದ್ದ ರ‍್ಯಾಲಿ ಮೇಲೆ ಇಷ್ಟೊಂದು ನಿಯಂತ್ರಣ ಯಾಕೆ ಎಂದು ಪ್ರಶ್ನಿಸಿದರು.

ಈ ಸಂಬಂಧ ಬೆಂಗಾಲ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ರಾಜ್ಯ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಪ್ರತಿಕ್ರಿಯಿಸಿ, ರಾಜ್ಯವನ್ನು ಉತ್ತರ ಕೊರಿಯಾ ರೀತಿ ಆಗುತ್ತಿದೆ. ಮಮತಾ ಬ್ಯಾನರ್ಜಿಗೆ ಜನರ ಬೆಂಬಲ ದೊರೆಯುತ್ತಿಲ್ಲ ಆದ್ದರಿಂದ ನಿಯಂತ್ರಿತ ಆಡಳಿತ ನಡೆಸಲು ಮುಂದಾಗಿದ್ದಾರೆ. ಜನರನ್ನು ಪೊಲೀಸರ ಮೂಲಕ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಅದಕ್ಕೆ ನಿನ್ನೆ ಹಾಗೂ ಇಂದು ನಡೆದ ಘಟನೆಗಳೇ ಸಾಕ್ಷಿ ಎಂದರು. ಮುಂಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!