ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಕ್ವೆಡಾರ್ನ ರಾಜಧಾನಿ ಕ್ವಿಟೊ ಜೈಲಿನಲ್ಲಿ ಕೈದಿಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಮೂವರು ಕುಖ್ಯಾತ ಅಪರಾಧಿಗಳನ್ನು ಹೆಚ್ಚಿನ ಭದ್ರತಾ ಸೆಲ್ಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರದಿಂದ ಜೈಲಿನಲ್ಲಿ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಿಟೋ ಜೈಲಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮತ್ತು ಸೇನೆ ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕೈದಿಗಳ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ತನಿಖಾ ಕಚೇರಿ ಹೇಳಿದೆ.
ಈಕ್ವೆಡಾರ್ನ ಕಾರಾಗೃಹದಲ್ಲಿ ಗಲಭೆ ನಡೆಯುತ್ತಿರುವುದು ಇದು ಮೊದಲಲ್ಲ. ಗುವಾಕ್ವಿಲ್ನ ಜೈಲಿನಲ್ಲಿ ಕಳೆದ ತಿಂಗಳು ನಡೆದ ಘರ್ಷಣೆಯಲ್ಲಿ 13 ಕೈದಿಗಳು ಮೃತಪಟ್ಟಿದ್ದರು. ಸತತ ಗಲಭೆಗಳಿಂದಾ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರ ಸರ್ಕಾರ 10ಕ್ಕೂ ಹೆಚ್ಚು ಗ್ಯಾಂಗ್ ಲೀಡರ್ಗಳನ್ನು ಬೇರೆಡೆಗೆ ಸ್ಥಳಾಂತರಿಸಿತ್ತು.