ಮರಳು ಗಣಿಗಾರಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ, ನಾಲ್ವರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಮರಳುಗಾರಿಕೆ ವಿಷಯವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಅಮೀನಾಬಾದ್ ಗ್ರಾಮದ ಸೋನೆ ನದಿ ದಂಡೆಯಲ್ಲಿ ಮರಳುಗಾರಿಕೆ ವಿಚಾರವಾಗಿ ಜಗಳ ಆರಂಭವಾಗಿದೆ. ಸೋನೆ ನದಿ ದಂಡೆಯ ಮರಳು ಅತ್ಯುತ್ತಮವಾಗಿದ್ದು, ಭಾರೀ ಬೇಡಿಕೆ ಇದೆ. ಫೌಜಿ ಮತ್ತು ಸಿಪಾಹಿ ಗುಂಪಿನ ನಡುವೆ ಜಗಳ ಆರಂಭವಾಗಿದ್ದು, ಯಾರು ಯಾವ ಭಾಗದಲ್ಲಿ ಮರಳುಗಾರಿಕೆ ಮಾಡಬೇಕು ಎಂಬ ವಿಷಯಕ್ಕೆ ಮಾತಿಗೆ ಮಾತಾಗಿದೆ. ಮಾತು ನಂತರ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ರಾತ್ರಿಯಿಡೀ ಗುಂಡಿನ ಚಕಮಕಿ ನಡೆದಿದ್ದು, ಸ್ಥಳೀಯರು ಆ ಜಾಗಕ್ಕೆ ಕಾಲಿಡಲು ಹೆದರಿದ್ದಾರೆ. ಮೃತದೇಹಗಳನ್ನು ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!