ಅಥ್ಲೀಟ್‌ ಆಗುವ ಮಹಾದಾಸೆಯನ್ನು ಸಿಎಂ ಯೋಗಿ ಬಳಿ ಹೇಳಿಕೊಳ್ಳಲು 200 ಕಿಮೀ ಓಟ ಆರಂಭಿಸಿದ 10ರ ಬಾಲಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈ ಬಾಲಕಿಯ ವಯಸ್ಸು ಕೇವಲ 10 ವರ್ಷ. ಓದುತ್ತಿರುವುದು 4ನೇ ತರಗತಿ. ಆದರೆ ಗುರಿ ಮಾತ್ರ ಮಹತ್ತರವಾದದ್ದು. ಆಕೆಯ ಹೆಸರು ಕಾಜಲ್‌, ಉತ್ತರ ಪ್ರದೇಶದ ಬಾಲಕಿ. ಅಥ್ಲೀಟ್‌ ಆಗುವ ಮಹದಾಸೆಯನ್ನು ಹೊತ್ತು ಓಟ ಆರಂಭಿಸಿದ್ದಾಳೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ತನ್ನ ಕನಸನ್ನು ಹೇಳಿಕೊಳ್ಳುವ ಅಪೇಕ್ಷೆ ಬಾಲಕಿಯದ್ದು.
ಇದಕ್ಕಾಗಿ ಕಾಜಲ್ ಭಾನುವಾರ (ಏಪ್ರಿಲ್ 10, 2022) ಪ್ರಯಾಗ್ ರಾಜ್‌ನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೋವರೆಗೆ 200 ಕಿ.ಮೀ ಮ್ಯಾರಥಾನ್ ಆರಂಭಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಕಾಜಲ್‌, ಅಥ್ಲೀಟ್ ಆಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ. ಇದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸಹಾಯ ಮಾಡುತ್ತಾರೆ ಎಂಬ ಆಶಾಭಾವನೆ ಇದೆ ಎಂದರು. 2021 ರಲ್ಲಿ ಇಂದಿರಾ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದೆ ಆದರೆ, ಜಿಲ್ಲಾಡಳಿತ ಹಾಗೂ ಶಾಲೆಯಿಂದ ಯಾವುದೇ ಸಹಾಯ ಸಿಗಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಬಾಲಕಿ ಇದೇ ತಿಂಗಳ 17 ರಂದು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ತನ್ನ ಕನಸನ್ನು ಹಂಚಿಕೊಳ್ಳಲಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!