VIDEO | ಹೀನಾಯ ಸೋಲಿನ ನಂತರ ಎಲ್​ಎಸ್​ಜಿ ಮಾಲೀಕನಿಂದ ಕೆ.ಎಲ್‌ ರಾಹುಲ್‌ಗೆ ಕ್ಲಾಸ್‌??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ನಡೆದಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ  ಹೈದರಾಬಾದ್ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್‌ಗಳಲ್ಲಿ ಈ ಗುರಿ ಮುಟ್ಟಿದೆ. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್‌ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ರಾಹುಲ್‌ ಹಾಗೂ ಸಂಜೀವ್‌ ನಡುವೆ ಫೀಲ್ಡ್‌ನಲ್ಲಿ ಮಾತುಕತೆ ನಡೆಯುತ್ತಿದ್ದು, ಮುಖದಲ್ಲಿ ಸೀರಿಯಸ್‌ನೆಸ್‌ ಇದೆ. ಹೀನಾಯ ಸೋಲಿಗೆ ಸಂಬಂಧಿಸಿದಂತೆ ಸಂಜೀವ್‌ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ ಎನ್ನುವಂತೆ ಕಾಣಿಸುತ್ತಿದೆ.

ಗೋಯೆಂಕಾ ರಾಹುಲ್​ಗೆ ಏನೇನೋ ವಿವರಿಸಲು ಪ್ರಯತ್ನಿಸುತ್ತಿದ್ದಾರೆ.ಸಂಜೀವ್‌ ಸಿಟ್ಟಿನ ಹಾವಭಾವ ಹಾಗೂ ರಾಹುಲ್‌ ಪಶ್ಚಾತ್ತಾಪದ ಮುಖ ನೋಡಿ ಬೈಸಿಕೊಳ್ತಿದ್ದಾರೆ ಎಂದು ಫ್ಯಾನ್ಸ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!