DO YOU KNOW | ದೇಹದ ಕೆಲವೊಂದು ಅಂಗಗಳನ್ನು ಪದೇ ಪದೇ ಸ್ಪರ್ಶಿಸಬೇಡಿ, ತೊಂದರೆ ಉಂಟಾದೀತು ಎಚ್ಚರ!!

ಹೆಚ್ಚಿನ ಜನರು ತಮ್ಮ ದೇಹದ ಭಾಗಗಳಾದ ಕಣ್ಣು, ಮೂಗು, ಕಿವಿ ಇತ್ಯಾದಿಗಳನ್ನು ಸ್ಪರ್ಶಿಸುವ ಅಥವಾ ಸ್ಕ್ರಾಚಿಂಗ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ನಮ್ಮ ದೇಹದ ಹಲವು ಭಾಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದು ಅಪಾಯದಿಂದ ಕೂಡಿದೆ. ಸ್ಪರ್ಶಿಸುವುದು ಅಥವಾ ಉಜ್ಜುವುದು ಸೋಂಕಿಗೆ ಕಾರಣವಾಗಬಹುದು.

ಅನೇಕ ಜನರು ಆಗಾಗ್ಗೆ ತಮ್ಮ ಕಣ್ಣುಗಳನ್ನು ಸ್ಪರ್ಶಿಸುತ್ತಾರೆ. ನೀವು ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಉಜ್ಜುವ ಅಭ್ಯಾಸ ಹೊಂದಿರುತ್ತಾರೆ. ಕಣ್ಣುಗಳು ತುಂಬಾ ಸೂಕ್ಷ್ಮ ಎಂದು ಎಲ್ಲರಿಗೂ ತಿಳಿದಿದೆ. ಕಣ್ಣು ಬಹಳ ಬೇಗ ಉರಿಯುತ್ತದೆ. ನಮ್ಮ ಕೈ ಮತ್ತು ಉಗುರುಗಳಲ್ಲಿರುವ ರೋಗಾಣುಗಳು ನಮ್ಮ ಕಣ್ಣುಗಳನ್ನು ಸೇರುತ್ತದೆ.

ಮಲ ವಿಸರ್ಜನೆ ಜಾಗದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚು. ದೇಹದ ಇತರ ಭಾಗಗಳಿಗೆ ಸೋಂಕು ಹರಡುವ ಹೆಚ್ಚಿನ ಅಪಾಯವಿದೆ. ಆದ್ದರಿಂದ ಅಲ್ಲಿನ ಸ್ಪರ್ಶವು ಅನಾರೋಗ್ಯಕ್ಕೆ ಆಹ್ವಾನ ಮಾಡಿದಂತೆ.

ಅನೇಕ ಜನರು ತಮ್ಮ ಬೆರಳುಗಳಿಂದ ಮೂಗು ಸ್ವಚ್ಛಗೊಳಿಸುತ್ತಾರೆ. ಆದರೆ ಅವರಿಗೆ ಅರಿವಾಗದ ಸಂಗತಿಯೆಂದರೆ ಅವರು ಮೂಗನ್ನು ಶುಚಿಗೊಳಿಸುತ್ತಿಲ್ಲ, ಅವರು ಅದನ್ನು ಕೊಳಕು ಮಾಡುತ್ತಿದ್ದಾರೆ. ನೀವು ನಿಮ್ಮ ಮೂಗನ್ನು ಬೆರಳುಗಳಿಂದ ಸ್ವಚ್ಛ ಮಾಡಿದಾಗ, ನಿಮ್ಮ ಬೆರಳುಗಳಿಂದ ಬ್ಯಾಕ್ಟೀರಿಯಾಗಳು ನಿಮ್ಮ ಮೂಗಿಗೆ ಪ್ರವೇಶಿಸುತ್ತವೆ.

ಅನೇಕ ಜನರು ತಮ್ಮ ಉಗುರುಗಳನ್ನು ಬಾಯಿಯಿಂದ ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದೂ ಒಳ್ಳೆಯದಲ್ಲ. ಉಗುರುಗಳಲ್ಲಿರುವ ಸೂಕ್ಷ್ಮಜೀವಿಗಳು ಸುಲಭವಾಗಿ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!