Wednesday, February 28, 2024

SPORTS | ‘6,6,6,6,6,6’ ಅಬ್ಬರದ ದಾಖಲೆ ಸೃಷ್ಟಿಸಿದ ಕ್ಲಾಸೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಸಿಡಿಲಬ್ಬರದ ವೇಗದ ಅರ್ಧಶಕವನ್ನು ಕ್ಲಾಸೆನ್ ನಿರ್ಮಿಸಿದ್ದು, ಎರಡು ಫೋರ್ ಹಾಗೂ ಆರು ಸಿಕ್ಸ್ ಬಾರಿಸಿ 50 ರನ್ ಕಲೆಹಾಕಿದ್ದಾರೆ.

ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಟೂರ್ನಿಯ 22ನೇ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಹಾಗೂ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಕೇವಲ 16 ಬಾಲ್‌ಗಳಲ್ಲಿ 50 ರನ್ ಕಲೆಹಾಕಿದ ಕೀರ್ತಿಗೆ ಕ್ಲಾಸೆನ್ ಪಾತ್ರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!