ನಿಮಗಿಂತ ಪ್ರತಿಭಾವಂತರ ಸ್ನೇಹ ಬೆಳೆಸಿ, ಅಸೂಯೆ ಬೇಡ: ಪ್ರಧಾನಿ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಮಗಿಂತ ಪ್ರತಿಭಾವಂತರ ಸ್ನೇಹ ಬೆಳೆಸಿ, ಅವರಿಂದ ಕಲಿಯಲು ಪ್ರಯತ್ನಿಸಿ. ನಿಮಗಿಂತ ಪ್ರತಿಭಾವಂತರು ಎನ್ನುವ ಬಗ್ಗೆ ಅಸೂಯೆ ಬೇಡ ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಪರೀಕ್ಷಾ ಪೆ ಚರ್ಚಾ ಏಳನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಸ್ನೇಹಿತರ ಬಗ್ಗೆ ಅಸೂಯೆ ಇದ್ದವರು ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಮೇಲೆ ನಂಬಿಕೆ ಇರಲಿ. ಹಾಗೇ ಇತರರಿಂದ ಕಲಿಯುವ ಬುದ್ಧಿಯೂ ಇರಲಿ ಎಂದಿದ್ದಾರೆ.

ಸ್ಪರ್ಧೆ ಇಲ್ಲದ ಜೀವನ ಯಾರಿಗಿದೆ? ಸ್ಪರ್ಧೆ ಇರಲಿ, ಆರೋಗ್ಯಕರವಾಗಿರಲಿ. ಪೋಷಕರೂ ಅಷ್ಟೇ ನಿಮ್ಮ ಮಗುವಿನ ರಿಪೋರ್ಟಿಂಗ್ ಕಾರ್ಡ್ ನಿಮ್ಮ ವಿಸಿಟಿಂಗ್ ಕಾರ್ಡ್ ಅಲ್ಲ. ಮಕ್ಕಳನ್ನು ಕಂಪೇರ್ ಮಾಡಬೇಡಿ ಎಂದು ಹೇಳಿದ್ದಾರೆ.

ಬರವಣಿಗೆ ಬಗ್ಗೆ ಹೆಚ್ಚು ಗಮನ ಇಡಿ, ಪರೀಕ್ಷೆ ಎಂದರೆ ಭಯ ಬೇಡ, ತಮಾಷೆ ನಗು ಮೂಲಕ ಓದಿದ್ದನ್ನು ನೆನಪಿಟ್ಟುಕೊಳ್ಳಿ. ಮಕ್ಕಳಿಗೆ ಹೊಸ ಪೆನ್ ಕೊಡಬೇಡಿ, ಹೊಸತೇನೂ ಬೇಡ, ಅವರಿಗೆ ಯಾವುದು ಅಭ್ಯಾಸ ಇದೆಯೋ ಅದರಲ್ಲೇ ಬರೆಯಲಿ. ಪರೀಕ್ಷೆ ದಿನ ಒತ್ತಡ ಸೃಷ್ಟಿಯಾಗುವಂಥ ಯಾವ ಕೆಲಸವೂ ಮಾಡಬೇಡಿ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!