ಮಾಮೂಲಿ ಟೀ ಬಿಡಿ, ಇನ್ಮೇಲೆ ಗುಲಾಬಿ ಚಹಾ ಟ್ರೈ ಮಾಡಿ: ಅದರಲ್ಲಿದೆ ಸಾಕಷ್ಟು ಆರೋಗ್ಯಕರ ಗುಣಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಂಠಿ ಟೀ, ಏಲಕ್ಕಿ ಟೀ ಅಂಥೆಲ್ಲಾ ಕೇಳಿರುತ್ತೇವೆ. ಆದರೆ ಈ ರೋಸ್ ಟೀ ಬಳಕೆ ತುಂಬಾ ಕಡಿಮೆ. ಗುಲಾಬಿ ಹೂವಿನ ದಳಗಳಿಂದ ಸಿಹಿ ತಿನಿಸು ಮಾಡ್ತಾರೆ, ರೋಸ್ ವಾಟರ್ ಅಂತ ಸೌಂದರ್ಯ ವರ್ಧಕದಂತೆಯೂ ಬಳಸುತ್ತಾರೆ. ಆದರೆ ಇದರಿಂದ ಟೀ ಮಾಡಿ ಎಷ್ಟು ಜನ ಸೇವಿಸಿದ್ದೇವೆ.. ಇಲ್ಲಿದೆ ನೋಡಿ ರೋಸ್ ಟೀ ಸೇವಿಸುವುದರಿಂದ ಸಿಗುವ ಪ್ರಯೋಜನಗಳು..

  • ಕಫೇನ್ ಮುಕ್ತ: ಸಾಮಾನ್ಯವಾಗಿ ಕಾಫಿ, ಟೀ, ಹಾಟ್ ಚಾಕೊಲೇಟ್ ಗಳಲ್ಲಿ ಕಫೇನ್ ಅಂಶ ಹಾಕಿರುತ್ತಾರೆ. ಇದರಿಂದ ರಕ್ತದೊತ್ತಡ ಹೆಚ್ಚಾಗಲಿದೆ. ಆದರೆ ರೋಸ್ ಟೀ ನಲ್ಲಿ ಕಫೇನ್ ಅಂಶ ಇರೋದಿಲ್ಲ.
  • ತೂಕ ಇಳಿಕೆ: ರೋಸ್ ಟೀ ನಲ್ಲಿ ಹೆಚ್ಚಿನ ನೀರಿನಂಶ ಇರಲಿದ್ದು, ಇದರಿಂದ ತೂಕ ಇಳಿಕೆಯಾಗಲಿದೆ.
  • ಆಂಟಿ ಆಕ್ಸಿಡೆಂಟ್ಸ್: ಇದರಲ್ಲಿ ಹೆಚ್ಚಿನ ಗಾಲಿಕ್ ಆಸಿಡ್, ಫೊಲಿಫಿನಾಲ್ಸ್ ಅಂಶಗಳಿದೆ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
  • ಮುಟ್ಟಿನ ಸಮಸ್ಯೆ: ಪೀರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆ ನೋವಿನ ಸಮಸ್ಯೆಗೆ ರೋಸ್ ಟೀ ಸಹಾಯಕ. ಪೀರಿಯಡ್ಸ್ ಸಮಯದಲ್ಲಿ ಅಥವಾ ಅದಕ್ಕೂ ಮುನ್ನ ರೋಸ್ ಟೀ ಸೇವಿಸುವುದು ಉತ್ತಮ.
  • ಜೀರ್ಣಕ್ರಿಯೆ: ರೋಸ್ ಟೀ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಗುಡ್ ಬ್ಯಾಕ್ಟೀರಿಯಾಗಳನ್ನು ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
  • ತ್ವಚೆಗೆ ಕಾಂತಿ: ಇದು ಚರ್ಮದ ಕಾಂತಿ ಹೆಚ್ಚಾಗಿಸಿ, ಸುಂದರವಾಗಿ ಕಾಣಲು ಸಹಕಾರಿಯಾಗಿದೆ.
- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!