ವಿಚಿತ್ರ ಆಚರಣೆ: ಗಡಿಯಾರ ಕೊಟ್ಟರೆ ನಿಮ್ಮ ಇಷ್ಟಾರ್ಥ ನೆರವೇರಿಸುವ ಬಾಬಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇವರ ಮೊರೆ ಹೋದ ಭಕ್ತರು ಅಲ್ಲಿನ ಮರಕ್ಕೆ ನೈವೇದ್ಯ ಮಾಡುವುದು, ಮರಕ್ಕೆ ತೊಟ್ಟಿಲು ಹಾಕುವುದು, ತೆಂಗಿನಕಾಯಿ ಹೊಡೆಯುವು, ಹೋಮ-ಹವನ ಮಾಡಿಸುವುದು ಹೀಗೆ ನಾನಾ ಕೆಲಸಗಳನ್ನು ಮಾಡುತ್ತಾರೆ. ಆದರೆ ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿ ಜಿಲ್ಲೆಯ ಅನ್ಹೆಲ್ ರಸ್ತೆಯಲ್ಲಿ ಸಾಗಸ್ ಮಹಾರಾಜ್ ಘಡಿ ವಾಲೆ ಬಾಬಾ ದೇವಸ್ಥಾನವಿದೆ.

ದೇವಾಲಯದ ಮುಂಭಾಗದಲ್ಲಿ ದೊಡ್ಡ ಆಲದ ಮರವಿದೆ. ಎತ್ತರದ ಆಲದ ಮರದ ಕೊಂಬೆಗಳ ಮೇಲೆ ಸ್ಥಳೀಯರು ಗೋಡೆ ಗಡಿಯಾರಗಳನ್ನು ನೇತು ಹಾಕುತ್ತಾರೆ. ಬಾಬಾರನ್ನು ಸ್ಥಳೀಯರು ಇಚ್ಛೆಗಳನ್ನು ಈಡೇರಿಸುವ ದೇವತೆಯಾಗಿ ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಿದವರು ಬಂದು ಬಾಬಾರವರ ದೇವಸ್ಥಾನದಲ್ಲಿರುವ ಮರಕ್ಕೆ ಗಡಿಯಾರಗಳನ್ನು ಕಟ್ಟುತ್ತಾರೆ. ಪ್ರಸ್ತುತ ಮರವು ಸುಮಾರು 2000 ಗಡಿಯಾರಗಳನ್ನು ಹೊಂದಿದೆ. ಈ ಹಿಂದೆ ಭಕ್ತರೊಬ್ಬರು ತಮ್ಮ ಇಷ್ಟಾರ್ಥ ನೆರವೇರಿದರೆ ಅವರ ಮನೆಯಲ್ಲಿರುವ ಅತ್ಯಂತ ದುಬಾರಿ ವಾಚ್ ನೀಡುವುದಾಗಿ ಬೇಡಿಕೊಂಡಿದ್ದರಂತೆ. ಅದರಂತೆ ಅವರ ಆಸೆ ಈಡೇರುತ್ತಿದ್ದಂತೆ ಗಡಿಯಾರವನ್ನು ಸಮರ್ಪಣೆಯಾಗಿ ನೀಡಲಾಯಿತು. ಅಂದಿನಿಂದ ಅವರ ಕುಟುಂಬ ಮತ್ತು ಅವರ ಪರಿವಾರದವರು ದೇವಾಲಯದಲ್ಲಿರುವ ಆಲದ ಮರಕ್ಕೆ ಗೋಡೆ ಗಡಿಯಾರಗಳನ್ನು ನೀಡುತ್ತಿದ್ದಾರೆ.

ಗೋಡೆ ಗಡಿಯಾರ ನೀಡುವುದು ತುಂಬಾ ವಿಚಿತ್ರ ಅಲ್ಲವೇ.. ಕೆಲವರು ಮೂಢನಂಬಿಕೆ ಎಂದು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಅವರವರ ನಂಬಿಕೆ ಅವರದ್ದು ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!