ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮೈಸೂರಿನ ತಾಯಿ ಚಾಮುಂಡೇಶ್ವರಿ ಬಳಿ ಮೇ 9ರಂದು ಕಾಂಗ್ರೆಸ್ ನಾಯಕರು ವಾಗ್ದಾನ ಮಾಡಿದ್ದರು. ಅದರಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಚಾಮುಂಡೇಶ್ವರಿ ತಾಯಿಯ ಹರಕೆ ತೀರಿಸಿದರು.
ಮೈಸೂರಿನಲ್ಲಿರುವ ಕಾಂಗ್ರೆಸ್ ನಾಯಕರು ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಕೆಂಪು ಮತ್ತು ಹಸಿರು ಸೀರೆ, ಅರಿಶಿನ-ಕುಂಕುಮ, ಬಳೆ, ವಿವಿಧ ರೀತಿಯ ಹೂವುಗಳು ಮಲ್ಲಿಗೆ, ಕನಕಾಂಬರ ಹೂವಿನ ಹಾರ, ಫಲಗಳನ್ನು ದೇವಿಗೆ ಅರ್ಪಿಸಿದರು. ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಈ ಹಿಂದೆ ಗ್ಯಾರಂಟಿ ಕಾರ್ಡ್ ಇಟ್ಟು ಪೂಜೆ ಸಲ್ಲಿಸುವಾಗ ಹರಕೆ ಕಟ್ಟಿಕೊಂಡಿದ್ದು, ಇದೀಗ ಇಂದು ಆ ಹರಕೆಯನ್ನು ತೀರಿಸಿದರು.