Tuesday, March 28, 2023

Latest Posts

ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಿಎಂ ಬಸವರಾಜ ಬೊಮ್ಮಾಯಿ : ಸನ್ಮಾನ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬೋರ್ಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರು ಮಂಗಳವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಯಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ​​11 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಮತ್ತು ಭಾರತದ ಮಾಜಿ ಸ್ಟಾರ್ ವಿಜಯ್ ಅಮೃತರಾಜ್ ಅವರನ್ನು ಸನ್ಮಾನಿಸಲು ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಮಂಗಳವಾರ ಇಲ್ಲಿಗೆ ಬೊಮ್ಮಾಯಿ ತಡವಾಗಿ ಆಗಮಿಸಿದ ಕಾರಣ ಸನ್ಮಾನ ಕಾರ್ಯಕ್ರಮ ರದ್ದಾಗಿದೆ.

ಲಿಯೊ ಅವರ ಪಂದ್ಯ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಮಗನ ಆಟ ನೋಡಲು ಬೋರ್ಗ್‌ ಅವರು ಗ್ಯಾಲರಿಯಲ್ಲಿ ಕುಳಿತುಕೊಂಡರು. ಪಂದ್ಯ ಶುರುವಾದ ಕೆಲವು ನಿಮಿಷಗಳ ಬಳಿಕ ಬೊಮ್ಮಾಯಿ ಕಾರ್ಯಕ್ರಮ ಸ್ಥಳಕ್ಕೆ ಬಂದರು.

ಮುಖ್ಯಮಂತ್ರಿ ಬಂದ ವಿಷಯವನ್ನು ಬೋರ್ಗ್ ಅವರ ಗಮನಕ್ಕೆ ತರಲಾಯಿತ. ಪಂದ್ಯ ಮುಗಿದ ಬಳಿಕವಷ್ಟೇ ಬರುವುದಾಗಿ ಬೋರ್ಗ್‌ ತಿಳಿಸಿದ್ದಾರೆ. ಇದರಿಂದ ಆಯೋಜಕರು ಸಮಾರಂಭವನ್ನು ರದ್ದುಗೊಳಿಸಬೇಕಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!