ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳನ್ನು ಉತ್ತರ ಕರ್ನಾಟಕದ ಭಾಗಕ್ಕೆ ತರುವ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳನ್ನು ಉತ್ತರ ಕರ್ನಾಟಕದ ಭಾಗಗಳಿಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಸಚಿವ ಶಿವರಾಮ ಹೆಬ್ಬಾರ ಒಡೆತನದ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಟೆಕ್ಸಟೈಲ್ಸ್ ಮತ್ತು ಗಾರ್ಮೆಂಟ್ ಇಂಡಸ್ಟ್ರೀಸ್ ಹೆಚ್ಚಿನ ಪ್ರಮಾಣದಲ್ಲಿ ತರಲಾಗುತ್ತಿದೆ ಎಂದರು.
ಮೊದಲನೇ ಹಂತದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು, ಎರಡನೆ ಹಂತದಲ್ಲಿ ಕೈಗಾರಿಕೆ‌ಗಳ ಸ್ಥಾಪನೆಗೆ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ವಿದೇಶದಿಂದ ಪೆಟ್ರೋಲ್, ಡಿಸೇಲ್ ತರಲು ನಮ್ಮ ದೇಶದಿಂದ ಹೆಚ್ಚಿನ ಹಣ ಖರ್ಚಾಗ್ತಿದೆ.
ಎಥಿನಾಲ್ ಬಳಕೆಗೆ ಉತ್ತೇಜನ ನೀಡಿ ಪರಿಸರ ಶುದ್ಧವಾಗಿಟ್ಟು ಆರ್ಥಿಕ ಚಟುವಟಿಕೆ ಮಾಡಬಹುದು ಅಂತಾ ಪ್ರಧಾನಿಯವರು ಎಥಿನಾಲ್ ಪಾಲಿಸಿಯನ್ನು ಜಾರಿಗೆ ತಂದಿದ್ದಾರೆ. ಇದರ ಹೆಚ್ಚಿನ ಲಾಭವನ್ನು ನಮ್ಮ ಕರ್ನಾಟಕ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಕಬ್ಬಲ್ಲದೆ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಮೆಕ್ಕೆಜೋಳ ಹಾಗೂ ಭತ್ತದ ಮೇಲಿನ ಕೆನೆಪದರದಿಂದ ಎಥಿನಾಲ್ ತಯಾರು ಮಾಡಬಹುದು. ಈ ಮೂರು ಪದಾರ್ಥಗಳಿಂದ ಎಥಿನಾಲ್ ತಯಾರು ಮಾಡಲು ಈ ಕಾರ್ಖಾನೆ ಸಿದ್ಧವಾಗ್ತಿದೆ. ಮೆಕ್ಕೆಜೋಳ, ಕಬ್ಬು, ಭತ್ತ ಬೆಳೆಗಾರರಿಗೆ ಕಾರ್ಖಾನೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರು ಪ್ರಗತಿಯಾಗಲು ಈ ಕಾರ್ಖಾನೆ ಅನುಕೂಲ ಆಗಲಿದೆ. ಯುವಕರು ಸ್ವಾವಲಂಬಿ ಆಗಬೇಕು ಅಂತಾ ಕಾರ್ಖಾನೆಗಳನ್ನ ನಮ್ಮ ಕ್ಷೇತ್ರಕ್ಕೆ ತರೋ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದಲ್ಲಿನ ಹುಡುಗರಿಗೆ ಈ ಕಾರ್ಖಾನೆಯಲ್ಲಿ ಉದ್ಯೋಗ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದೇನೆ. ರೈತರ ಬದುಕಿನಲ್ಲಿ ಬದಲಾವಣೆ ತರೋ ಕೆಲಸ ಈ ಕಾರ್ಖಾನೆಯಿಂದ ಆಗುತ್ತದೆ. ಕಾರ್ಖಾನೆಯಿಂದ ಈ ಭಾಗದಲ್ಲಿ ಬಹಳ ದೊಡ್ಡ ಆರ್ಥಿಕ ಬದಲಾವಣೆ ಆಗುತ್ತದೆ ಅಂತಾ ಹೇಳಿದರು.
ನನ್ನ ಕ್ಷೇತ್ರದ ರೈತರ ದೃಷ್ಟಿಯಿಂದ ನಾನಿಲ್ಲಿ ಕಾರ್ಖಾನೆ ಮಾಡಬೇಕು ಅಂತಾ ಹೇಳಿದ್ದೆ‌. ಈಗ ಇಲ್ಲಿ ಅಭಿವೃದ್ಧಿಯ ಚಿತ್ರಣವೆ ಬದಲಾಗಿದೆ.
ನನ್ನ ಕ್ಷೇತ್ರದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಈ ಕೆಲಸವನ್ನು ಮಾಡಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!