ನಿಮ್ಮ ಮಕ್ಕಳು ಎಲ್ಲದಕ್ಕೂ ಹಠ ಮಾಡುತ್ತಾರಾ? ಹಾಗಿದ್ದರೆ ಈ ರೀತಿ ಅವರನ್ನು ಟ್ರೈನ್ ಮಾಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ಮಗುವಲ್ಲಿಯೂ ಒಂದೊಂದು ವಿಶೇಷತೆ ಹಾಗೂ ಉತ್ತಮ ವ್ಯಕ್ತಿತ್ವ ಇರುತ್ತದೆ. ಆದರೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದನ್ನು ಪೋಷಕರು ಮರೆಯುತ್ತಾರೆ. ಇವುಗಳಿಗಾಗಿ ಮಕ್ಕಳು ಅಳುತ್ತಾರೆ, ಹಠ ಮಾಡೋದು, ಮೊಂಡುತನ, ಸ್ವಾರ್ಥ ಸ್ವಭಾವ ರೂಢಿಸಿಕೊಳ್ಳುತ್ತಾರೆ. ಹಾಗಿದ್ದರೆ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸ್ವಭಾವ ಕಲಿಸಿಕೊಡಲು ಹೀಗೆ ಮಾಡಿ…

ಇತರರಿಗೆ ಹೊಡೆಯುವ ಮಕ್ಕಳು:
ಮಕ್ಕಳು ತಮಗೆ ಆದ ನೋವು, ಬೇಸರವನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗದೆ ಹೊಡೆಯಲು ಮುಂದಾಗುತ್ತಾರೆ. ಅಂತಹ ಮಕ್ಕಳ ಮೇಲೆ ಕೂಗಾಡದೆ, ಹೊಡೆಯುವುದರಿಂದ ಆಗುವ ನೋವಿನ ಬಗ್ಗೆ ಅರಿವು ಮೂಡಿಸಿ.

ಎಲ್ಲವೂ ಬೇಕು ಅನ್ನೋ ಮಕ್ಕಳು:
ಇನ್ನು ಕೆಲವು ಮಕ್ಕಳು ಅಂಗಡಿಯಲ್ಲಿ ನೋಡಿದೆಲ್ಲ ಬೇಕು ಅನ್ನುತ್ತಾರೆ. ಫ್ರೆಂಡ್ಸ್ ಗಳ ಹತ್ತಿರ ಇರುವ ಎಲ್ಲಾ ಆಟಿಕೆ ಬೇಕೆನ್ನುತ್ತಾರೆ. ಅವರಿಗೆ ಅಗತ್ಯತೆಗಳ ಬಗ್ಗೆ ತಿಳಿಸಿಕೊಡಿ.

ಆತ್ಮ ಸಾಕ್ಷಿ:

ತಾವು ಮಾಡಿದ ತಪ್ಪನ್ನು ಯಾವುದೇ ಕಾರಣಕ್ಕೂ ಮುಚ್ಚಿಡದೇ ಹೇಳಬೇಕು. ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಬಾರದು. ಶಿಸ್ತಿನ ಬದುಕಿನ ಬಗ್ಗೆ ಅರಿವು ಮೂಡಿಸಿ.

ಕೇರ್ ಲೆಸ್:

ದೊಡ್ಡವರು ಹೇಳುವ ಮಾತನ್ನು ಕೇಳಬೇಕು. ಹಿರಿಯರ ಮಾತನ್ನು ನಿರ್ಲಕ್ಷಿಸಿದರೆ ಅದನ್ನು ಸಮರ್ಥಿಸೋಕೆ ಬಿಡದಿರಿ.

ಇಷ್ಟವಾಗದ ವಿಷಯ:

ಮಕ್ಕಳಿಗೆ ಕೆಲವೊಮ್ಮೆ ತಮಗೆ ಇಷ್ಟವಾಗದ ಜನರು, ಇಷ್ಟವಾಗದ ಟಿವಿ ಶೋಗಳನ್ನು ನೋಡುವಂತೆ ಒತ್ತಾಯಿಸಬೇಡಿ. ಕೆಲವೊಂದರ ಬಗ್ಗೆ ಕ್ರಮೇಣ ತಿಳಿದುಕೊಳ್ಳುತ್ತಾರೆ.

ಊಟ ಮಾಡಲ್ಲ:
ಊಟ ಮಾಡಲ್ಲ ಅಂತ ಹಠ ಹಿಡಿಯುವ ಮಕ್ಕಳಿಗೆ ಊಟದ ಮಹತ್ವ ಅರಿಯುವಂತೆ ಮಾಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!