ತುಂಗಾರತಿ ಯೋಗ ಮಂಟಪ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ

ಹೊಸದಿಗಂತ ವರದಿ, ದಾವಣಗೆರೆ:

ದಕ್ಷಿಣ ಕಾಶಿ ಹರಿಹರ ತುಂಗಭದ್ರಾ ನದಿಯ ತಟದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ತುಂಗಾರತಿ ಯೋಗ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲೆಯ ಹರಿಹರ ನಗರದ ಹಳೆ ಸೇತುವೆ ಸಮೀಪ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ನದಿ ತೀರದಲ್ಲಿ 108 ಆರತಿ ಮಂಟಪಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಗಂಗಾ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಕೆಲ ಕಾಲ ಧ್ಯಾನ ಮಾಡಿದ ಮುಖ್ಯಮಂತ್ರಿಗಳು, ವಿಭೂತಿ ಧರಿಸಿ ಕೇಸರಿ ವಸ್ತ್ರದೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ನಿರಾಣಿ, ಶಂಕರ ಪಾಟೀಲ್ಮು ನೇನಕೊಪ್ಪ, ಬಿ.ಎ.ಬಸವರಾಜ್ ಭೈರತಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮತ್ತಿತರರು ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!