Friday, June 2, 2023

Latest Posts

ಮೆಗಾ ಟೆಕ್ಸ್ ಟೈಲ್ ಪಾರ್ಕ್‌ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಕಲಬುರಗಿ

ರೈಲು, ರಸ್ತೆ, ವಿಮಾನಯಾನ ಸಂಪರ್ಕ ಹೀಗೆ ಅನೇಕ ಮೂಲಸೌಕರ್ಯಗಳನ್ನು ಹೊಂದಿರುವ ಮತ್ತು ಮುಂಬೈ-ಬೆಂಗಳೂರು-ಹೈದ್ರಾಬಾದ ನಗರಗಳಿಗೆ ಕೇಂದ್ರೀತವಾಗಿರುವ ಕಲಬುರಗಿ ನಗರವು ಮುಂದಿನ ದಿನದಲ್ಲಿ ದೇಶದ ಭವಿಷ್ಯದ ನಗರವಾಗಿ ರೂಪಗೊಳ್ಳಲಿದೆ. ಇದಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆಯ ಟೆಕ್ಸ್‍ಟೈಲ್ ಪಾರ್ಕ್ ಕೂಡ ಪ್ರದೇಶದ ಆರ್ಥಿಕತೆ ಚೇತರಿಕೆಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಕಲಬುರಗಿ ನಗರದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯ ಮತ್ತು ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಆಯೋಜಿಸಿದ ಕೇಂದ್ರ ಸರ್ಕಾರದ ಪಿಎಂ-ಮಿತ್ರ ಯೋಜನೆಯಡಿ ಮಂಜೂರಾಗಿರುವ ಕಲಬುರಗಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗೆ ಚಾಲನೆ ನೀಡಿ ಮಾತನಾಡಿದರು.

ಕಲಬುರಗಿ ಹಿಂದುಳಿದ ಪ್ರದೇಶ. ಪ್ರತಿ ವರ್ಷ ಇಲ್ಲಿಂದ ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಹೊರಡುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸದಲ್ಲಿ ಮಕ್ಕಳೊಂದಿಗೆ ಮಕ್ಕಳೊಂದಿಗೆ ಆ ತಾಯಂದಿರುವ ಬದುಕು ಕಟ್ಟಿಕೊಳ್ಳುವ ಜೀವನ ಕಂಡಿರುವೆ. ಇದು ತಪ್ಪಿಸುವುದು ಸವಾಲಿನ ಕೆಲಸವೇ ಆಗಿದೆ. ಇದಕ್ಕಾಗಿ ಸ್ಥಳೀಯವಾಗಿ ಉದ್ಯೋಗ ದೊರಕುವ ನಿಟ್ಟಿನಲ್ಲಿ ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ 7 ಟೆಕ್ಸ್‍ಟೈಲ್‍ನಲ್ಲಿ ಕಲಬುರಗಿ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದು, ಇದು ಇಲ್ಲಿನ ಜನರ ಬದುಕಿಗೆ ಭದ್ರತೆ ಒದಗಿಸುವ ಮತ್ತು ಲಕ್ಷಾಂತರ ಜನರ ಬದುಕು ಬದಲಾಯಿಸುವ ಕೆಲಸವಾಗಲಿದೆ ಎಂದು ಸಂತಸದಿಂದ ನುಡಿದರು.

ದೇಶದಲ್ಲಿಯೇ ಮಾದರಿಯಾಗಿ ಉದ್ಯೋಗ ನೀತಿ ಜಾರಿಗೆ ತಂದ ರಾಜ್ಯ ನಮ್ಮದಾಗಿದೆ. ಜವಳಿ ಪಾರ್ಕ್‍ನಿಂದ ಕೆಲಸ ಸಿಗುವ ಪ್ರತಿ ಕಾರ್ಮಿಕನಿಗೆ 3,000 ರೂ. ಇನ್ಸೆನ್ಟಿವ್ ನೀಡಲಾಗುತ್ತಿದೆ. ಉದ್ಯಮಿಗಳು ಇಲ್ಲಿ ಬಂದು ಕೈಗಾರಿಕೆ ಸ್ಥಾಪಿಸಲು ಅನುಕೂಲವಾಗಲು ನೀರು, ವಿದ್ಯುತ್ ರಿಯಾಯಿತಿ ನೀಡಲಾಗಿದೆ. 1,000 ಎಕರೆ ಜಮೀನು ಕೇಂದ್ರಕ್ಕೆ ಉಚಿತ ನೀಡಲಾಗಿದೆ. ಹಿಂದೆಲ್ಲ ಕೆಟ್ಟ ನೀತಿ ಪರಿಣಾಮ ಇಲ್ಲಿನ ಎಂ.ಎಸ್.ಕೆ.ಮಿಲ್ ಸೇರಿದಂತೆ ರಾಜ್ಯದ ಅನೇಕ ಮಿಲ್ ಬಂದ್ ಆಗಿದ್ದವು ಎಂದು ನೆಪಿಸಿಕೊಂಡ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರವಾಗಿದ್ದು, ದೂರದೃಷ್ಠಿಯ ಯೋಜನೆ ಇದಾಗಿದೆ. ಮುಂದಿನ 10 ವರ್ಷದಲ್ಲಿ ಕಲಬುರಗಿ ದೇಶದ ಪ್ರಮುಖ ನಗರದಲ್ಲಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿ ದಕ್ಷಿಣ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ವಿಧಾನಸಭೆ ಶಾಸಕರುಗಳಾದ ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕರುಗಳಾದ ಸುನೀಲ್ ವಲ್ಲ್ಯಾಪುರೆ, ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!