Friday, June 2, 2023

Latest Posts

ಅದಾನಿ ಜೊತೆ ಸೋನಿಯಾ ಗಾಂಧಿ ಅಳಿಯ ವಾದ್ರಾ ಫೋಟೋ: ಈ ಹಿಂದಿನ ಕಾರಣವೇನು? ಪ್ರಶ್ನಿಸಿದ ಸ್ಮೃತಿ ಇರಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅದಾನಿ ವಿಚಾರದಲ್ಲಿ ಕಾಂಗ್ರೆಸ್‌ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಮಾಡುತ್ತಿದ್ದು, ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗೌತಮ್‌ ಅದಾನಿ ಜೊತೆಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಚಿತ್ರವನ್ನು ತೋರಿಸಿದ್ದರು.

ಇದೀಗ ಬಿಜೆಪಿ ಕೂಡ ಕಾಂಗ್ರೆಸ್‌ಆರೋಪಗಳಿಗೆ ತಿರುಗೇಟು ನೀಡಿದೆ. ಕಳೆದ ತಿಂಗಳು ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್‌ ವಾದ್ರಾ ಹಾಗೂ ಗೌತಮ್‌ ಅದಾನಿ ಜೊತೆಯಲ್ಲಿಯೇ ಇರುವ ಚಿತ್ರವನ್ನು ಪ್ರಕಟ ಮಾಡಿತ್ತು. ಈ ಕುರಿತಾಗಿ ಮಂಗಳವಾರ ಪ್ರಶ್ನೆ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಫೋಟೋಗಳನ್ನೇ ಸಾಕ್ಷ್ಯ ಎಂದು ನಂಬುವುದಾದರೆ, ಗೌತಮ್‌ ಅದಾನಿ ಜೊತೆ ರಾಬರ್ಟ್‌ ವಾದ್ರಾ ಯಾಕಿದ್ದಾರೆ ಎಂದೂ ಕೇಳಬಹುದಲ್ಲವೇ? ಎಂದು ಕಾಂಗ್ರೆಸ್‌ಅನ್ನು ಪ್ರಶ್ನೆ ಮಾಡಿದ್ದಾರೆ.

ರಾಹುಲ್‌ ಗಾಂಧಿಗೆ ಅದಾನಿ ಜೊತೆ ಸಮಸ್ಯೆ ಇದ್ದರೆ, ರಾಬರ್ಟ್‌ ವಾದ್ರಾ ಅದಾನಿ ಅವರ ಕೈಗಳನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿರುವ ಹಿಂದಿನ ಕಾರಣವೇನು ಎಂದು ದೆಹಲಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ.

2009ರಲ್ಲಿ ತೆಗೆದ ಈ ಚಿತ್ರದಲ್ಲಿ ಗೌತಮ್‌ ಅದಾನಿ ಹಾಗೂ ರಾಬರ್ಟ್‌ ವಾದ್ರಾ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!