Monday, September 26, 2022

Latest Posts

ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ, ಮಾಜಿ ಸಿಎಂ ಎಚ್‌ಡಿಕೆ ಸಾಥ್

ಹೊಸದಿಗಂತ ವರದಿ, ರಾಮನಗರ:
ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದು, ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾರೆ. 500 ಮೀಟರ್​ಗೂ ಹೆಚ್ಚು ದೂರ ರೈಲ್ವೆ ಹಳಿ ಮೇಲೆ ನಡೆದು ಬಕ್ಷಿ ಕೆರೆ ವೀಕ್ಷಣೆ ಮಾಡಿದ ಸಿಎಂಗೆ ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್​.ಅಶೋಕ್​, ಡಾ.ಸಿ.ಎನ್​.ಅಶ್ವಥ್ ನಾರಾಯಣ್​​, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್​ ನೀಡಿದ್ದಾರೆ.
ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾರೆ.
ರಣಭೀಕರ ಮಳೆಗೆ ರಾಮನಗರ ಅಕ್ಷರಶಃ ತತ್ತರಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕಂಡೂಕೇಳರಿಯದಂತಹ ಮಳೆಯಾಗಿದ್ದು, ನೀರು ತುಂಬಿರುವ ಬಡಾವಣೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗುತ್ತಿದೆ. ಹಾನಿ ಪ್ರದೇಶದ ಜನರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಈ ರೀತಿಯ ಮಳೆ ರಾಮನಗರ ಜಿಲ್ಲೆಯಲ್ಲಿ ಬಿದ್ದರಲಿಲ್ಲ. ಸರ್ಕಾರ ಏನು ಮಾಡುತ್ತೋ ಮಾಡಲಿ. ನಾನು ನನ್ನ ವೈಯಕ್ತಿಕವಾಗಿ ಈ ಜನರಿಗೆ ಸಹಾಯ ಮಾಡುತ್ತೇನೆ ಎಂದು ಎಚ್​ಡಿಕೆ ಹೇಳಿದ್ದಾರೆ. ಸಿಎಂ ಆಗಮನಕ್ಕೂ ಮುನ್ನಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಎಚ್​ಡಿಕೆ, ಜನರ ಕಷ್ಟ ಆಲಿಸಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ. ಈ ಕಾರಣದಿಂದ ಈ ರೀತಿಯ ಅನಾಹುತಗಳು ಆಗಿವೆ. ಪಕ್ಷಭೇದ ಮರೆತು ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!