ಪಿ.ಎಫ್.ಐ ಬ್ಯಾನ್ಎಲೆಕ್ಷನ್ ಗಿಮಿಕ್‌ ಎಂದ ಕಾಂಗ್ರೆಸ್‌ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ 

ಹೊಸದಿಗಂತ ವರದಿ, ಹಾವೇರಿ:
ಈ ಹಿಂದೆ ಪಿಎಫ್ ಐ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿದಾಗ ಕಾಂಗ್ರೆಸ್ ನವರು ಅದನ್ನು ಬ್ಯಾನ್ ಮಾಡಿ, ಎಂದು ಅಸೆಂಬ್ಲಿಯಲ್ಲಿ ಗದ್ದಲ ಎಬ್ಬಿಸುತ್ತಿದ್ದರು. ಈಗ ಪಿ.ಎಫ್.ಐ ಬ್ಯಾನ್ ಮಾಡಿದ ಮೇಲೆ ʼಇದೊಂದು ಎಲೆಕ್ಷನ್ ಗಿಮಿಕ್ʼ ಎನ್ನುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹಾವೇರಿಗೆ ಆಗಮಿಸಿದ ಸಂದರ್ಭದಲ್ಲಿ ನಗರದ ಸಿ.ಬಿ.ಕೊಳ್ಳಿ ಕಾಲೇಜಿನ ಹೆಲಿ ಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿ.ಎಫ್ ಐ ಬ್ಯಾನ್ ಪೊಲಿಟಿಕಲ್ ಗಿಮಿಕ್ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಕೆಂಡಾಮಂಡಲರಾದರು.
ಅವನ ಕಡೆಯಿಂದ ಇಂತಜ ಹೇಳಿಕೆಗಳನ್ನಲ್ಲದೇ ಬೇರೆ ಏನ್ನೂ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಬಿ.ಕೆ ಹರಿಪ್ರಸಾದ್ ವಿರುದ್ಧ ಏಕವಚನಲ್ಲೇ ಹರಿಹಾಯ್ದರು. ಮೊದಲು ಸೆಮಿ ಇತ್ತು ಆ ಬಳಿಕ ಕೆ‌ಎಫ್ ಡಿ ಆಯ್ತು. ಆಮೇಲೆ ಪಿಎಫ್ ಐ ಆಗಿದೆ. ಕಾಲ ಕಾಲಕ್ಕೆ ರೂಪಾಂತರ ಆಗುತ್ತಲೇ ಬರುತ್ತಿದೆ. ಎಸ್ ಡಿ ಪಿ ಐ ರಿಜಿಸ್ಟರಡ್ ಪೊಲಿಟಿಕಲ್ ಪಾರ್ಟಿ. ಹಾಗಾಗಿ ಅದಕ್ಕೆ ಅದರ ನಿಷೇಧಕ್ಕೆ ಬೇರೆಯೇ ಕಾನೂನು ಪ್ರಕ್ರಿಯೆಗಳಿವೆ. ಮುಂದಿನ ದಿನಗಳಲ್ಲಿ ಈ ಕುರಿತು ಕ್ರಮವಹಿಸಲಾಗುವುದು ಎಂದರು.
ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಫ್ಲೆಕ್ಸ್ ಹರಿದು ಹಾಕಿದ ವಿಚಾರವಾಗಿ ಶಿವಕುಮಾರ್ ಕಿಡಿ ಕಾರಿದ ವಿಚಾರವಾಗಿ ಪ್ರತಿಕ್ರೀಯಿಸಿದ ಸಿಎಂ, ಫ್ಲೆಕ್ಸ್ ಹಾಕುವ ಮೊದಲು ಪರ್ಮಿಷನ್ ತಗೊಬೇಕು. ಅವರು ಅನುಮತಿ ಪಡೆದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾವ ಪಕ್ಷವೂ ಇನ್ನೊಂದು ಪಕ್ಷದ ಫ್ಲೆಕ್ಸ್ ಹರಿಯುವಂತ ಕೃತ್ಯಕ್ಕೆ ಇಳಿಯುವುದಿಲ್ಲ ಎಂದುರು.
ಭಾರತ್ ಜೋಡೋ ಯಾರು ಮಾಡ್ತಿದ್ದಾರೆ. ಭಾರತ್ ಥೋಡೋ ಯಾರು ಮಾಡ್ತಿದ್ದಾರೆ ಜನಕ್ಕೆ ಗೊತ್ತಿದೆ ಎಂದು ಹೇಳಿದರು. ಭಾರತ್ ಜೋಡೋಗೆ ಸಾಹಿತಿಗಳ ಬೆಂಬಲ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕೆಲ ಸಾಹಿತಿಗಳು ಎರಡೂ ಕಡೆ ಇದ್ದಾರೆ. ಕೆಲವು ವಿಚಾರದಲ್ಲಿ ಅಲ್ಲೂ ಬೆಂಬಲ ಮಾಡ್ತಾರೆ‌. ಕೆಲವು ವಿಚಾರದಲ್ಲಿ ಇಲ್ಲಿಯೂ ಬೆಂಬಲ ನೀಡ್ತಾರೆ ಎಂದರು.
ಬಜೆಟ್ ನಲ್ಲಿ ಅನೌನ್ಸ್ ಮಾಡಿದಂತೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೇಳಿದಂತೆ ಕಾರ್ಯಗತ ಮಾಡ್ತಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!