ಅಭಿಮಾನಿ ಅನುಚಿತ ವರ್ತನೆಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ನಟಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಲಯಾಳಂನ ಜನಪ್ರಿಯ ನಾಯಕಿ ಸಾನಿಯಾ ಅಯ್ಯಪ್ಪನ್ ಸ್ಯಾಟರ್ಡೇ ನೈಟ್ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ಕಲಾವಿದೆ ಗ್ರೇಸ್ ಆಂಟೋನಿ ಜೊತೆ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿರುವ ಕಾರಣ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಪ್ರಚಾರದ ಭಾಗವಾಗಿ ಕೇರಳದ ಮಾಲ್‌ನಲ್ಲಿ ಕಾರ್ಯಕ್ರಮ ಆಯೋಜಸಿದ್ದರು.

ಸಾನಿಯಾ ಮತ್ತು ಗ್ರೇಸ್ ಆಂಟೋನಿ ಮಾಲ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಸುತ್ತುವರೆದರು. ಬಾಡಿ ಗಾರ್ಡ್‌ಗಳಿದ್ದರೂ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ವ್ಯಕ್ತಿಯೋರ್ವ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಅವರ ಮೈಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ನಟಿ ಆ ವ್ಯಕ್ತಿಗೆ ಕೆನ್ನೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!