Monday, August 15, 2022

Latest Posts

‘ಮಹಾ’ ಗದ್ದುಗೆ ಏರಿದ ಸಿಎಂ ಏಕನಾಥ್ ಶಿಂಧೆ ಸರಕಾರಕ್ಕೆ ‘ವಿಶ್ವಾಸಮತ’ ಅಗ್ನಿಪರೀಕ್ಷೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಹಾರಾಷ್ಟ್ರದ ಗದ್ದುಗೆ ಏರಿದ ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ಜುಲೈ 4 ರಂದು ವಿಶ್ವಾಸಮತ ಯಾಚಿಸಲಿದೆ .
ಈ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಈ ಸ್ಥಾನಕ್ಕೆ ಚುನಾವಣೆ ಅಗತ್ಯವಾದರೆ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗುವ ಜುಲೈ 3 ರಂದು ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ಜುಲೈ 4 ರಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸದನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ ಎಂದು ವಿಧಾನ ಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss