ಪರಿಹಾರ ಧನದಲ್ಲಿ ‘ಮಲತಾಯಿ ಧೋರಣೆ’ ಅರೋಪಕ್ಕೆ ಕಾಂಗ್ರೆಸ್ ಗೆ ಅಂಕಿ ಅಂಶ ಸಹಿತ ತಿರುಗೇಟು ನೀಡಿದ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ರಾಜ್ಯದಲ್ಲಿ ಪ್ರಕೃತಿ ವಿಕೋಪ‌ ಸಬಂಧ ನೀಡಲಾಗುವ ಪರಿಹಾರದಲ್ಲಿ ತಾರತಮ್ಯ‌ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ಬೀದರ್ ಜಿಲ್ಲೆಗೆ ಸರ್ಕಾರದಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್ ಆರೋಪಕ್ಕೆ ಟ್ವೀಟರ್ ನಲ್ಲಿ ಉತ್ತರಿಸಿರುವ ಮುಖ್ಯಮಂತ್ರಿ, ಅಂಕಿ ಅಂಶಗಳನ್ನೂ ನೀಡಿದ್ದಾರೆ.
ಆಯಾ ಜಿಲ್ಲೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರಕೃತಿ ವಿಕೋಪದ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನ ಆಧರಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದಿರುವ ಬೊಮ್ಮಾಯಿ, ಆ.2ರ ಮಾಹಿತಿಯಂತೆ ಬೀದರ್ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 20. 45 ಕೋಟಿ ರೂ., ಕಲಬುರಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 42. 07 ಕೋಟಿ ರೂ., ಯಾದಗಿರಿ ಜಿಲ್ಲಾಧಿಕಾರಿಗಳ ಬಳಿ 25.14 ಕೋಟಿ ರೂ., ವಿಜಯಪುರ ಜಿಲ್ಲಾಧಿಕಾರಿ ಖಾತೆಯಲ್ಲಿ 28.5 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!