ಮಳೆಗೆ ರಾಜ್ಯದಲ್ಲೆಷ್ಟು ಸಾವು ನೋವು, ಹಾನಿ, ಕಷ್ಟನಷ್ಟ? ಫುಲ್ ಡಿಟೇಲ್ಸ್ ಕೊಟ್ಟ ಕಂದಾಯ ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜ್ಯದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಉಂಟಾಗಿರುವ ನೆರೆ, ಪ್ರವಾಹಗಳಲ್ಲಿ ಇದುವರೆಗೂ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಕಂದಾಯ ಸಚಿವ ಅರ್. ಆಶೋಕ್ ಹೇಳಿದ್ದಾರೆ.
ಬೆಂಗಳೂರಿನ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 75 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಇದುವರೆಗೆ 7,386 ಜನರನ್ನು ಈ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು.
ರಾಜ್ಯದ 14 ಜಿಲ್ಲೆಗಳ 161 ಗ್ರಾಮಗಳು ಪ್ರವಾಹ‌ಪೀಡಿತವಾಗಿದೆ. ಒಟ್ಟು 21, 727 ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ. ಇನ್ನು ಸಿಡಿಲಿಗೆ15 ಮಂದಿ, ಮರ ಉರುಳಿ ಬಿದ್ದು ಐವರು, ಮನೆ ಕುಸಿತದಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 24 ಮಂದಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.

ಇದಲ್ಲದೆ ರಾಜ್ಯದಲ್ಲಿ 9 ಮಂದಿ ಭೂ ಕುಸಿತದಿಂದ ಒಬ್ಬರು ವಿದ್ಯುತ್ ಅವಘಡದಿಂದ ಮೃತಪಟ್ಟಿರುವುದಾಗಿ ಅವರು ತಿಳಿಸಿದರು. ರಾಜ್ಯದಲ್ಲು 666 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದರೆ, 2,949 ಮನೆಗಳು ತೀವ್ರವಾಗಿ, 17, 750 ಮನೆಗಳು ಭಾಗಶ:ವಾಗಿ ಹಾನಿಯಾಗಿವೆ. ಕೃಷಿ ಕ್ಷೇತ್ರದಲ್ಲಿಯೂ ಅಪಾರ ಹಾನಿಯಾಗಿದೆ. 1,29,087 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 7,942 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಅವರು ಇದೇ ಸಂದರ್ಭ ಅಂಕಿ ಅಂಶ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!