ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ಕರ್ನಾಟಕ ಮಾದರಿ ರಾಜ್ಯವಾಗುತ್ತದೆ: ಸಿಎಂ

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿನ ಗಲಭೆಯನ್ನು ನಾವು ಸಾಮನ್ಯ ಗಲಭೆ‌ ಎಂದು ಪರಿಗಣಿಸಿಲ್ಲ. ಇದರ ಹಿಂದೆ ಷಡ್ಯಂತ್ರ ಇದೆ, ಪೊಲೀಸ್ ಠಾಣೆಯನ್ನೇ ಟಾರ್ಗೆಟ್ ಮಾಡಿ, ಸಂಚಿತ ದಾಳಿ ನಡೆಸಲಾಗಿದೆ. ಗಲಭೆಕೋರರ ಮೇಲೆ ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಮಾಡ್ತೇವೆ ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ಬೇರೆ ಬೇರೆ ಶಕ್ತಿಗಳ‌ ಕುಮ್ಮಕ್ಕಿನ‌ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ಇದರ ಹಿಂದಿನ ಬಯಲಿಗೆ ಎಳೆಯಲಾಗುವುದು ಡಿಜೆ ಹಳ್ಳಿ – ಕೆಜೆ ಹಳ್ಳಿ ಗಲಭೆಯಲ್ಲಿ ಯಾವ ರೀತಿ ಕ್ರಮ ಆಗಿದೆ. ಇಲ್ಲೂ ಕ್ರಮ ಆಗಲಿದೆ ಎಂದರು. ದೇಶದ ಕೆಲವು ಕಡೆ ಕೋವಿಡ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸೂಚನೆ ನೀಡಿದೆ‌‌. ಪ್ರಧಾನಮಂತ್ರಿಗಳೇ ಏ.27ರಂದು ವಿಡಿಯೋ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಹೇಳಿದರು.

ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ. ತಜ್ಞರು ಈಗಾಗಲೇ ವೈರಸ್ ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ‌ ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು, ಯಾವ ದೇಶದಿಂದ ಬಂದಿದೆ, ಯಾರು ಕಳಿಸಿದ್ದಾರೆ ಎಲ್ಲವನ್ನೂ ತನಿಖೆ ಮಾಡಲಾಗುತ್ತದೆ. ಕೆಲವೊಮ್ಮೆ ಇಲ್ಲಿಯೇ ಕೂತು ಕೆಲವರು ಬೇರೆ ದೇಶದಿಂದ ಕಳಿಸಿದಂತೆ ಮಾಡುತ್ತಿದ್ದಾರೆ. ಇದಕ್ಮೆ ಕೇಂದ್ರದ ಸಹಕಾರದಿಂದ ಇ-ಮೇಲ್‌ ಮೂಲ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ. ನಮ್ಮ ನಿರೀಕ್ಷೆಗಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆ.

ಅಕ್ರಮದಲ್ಲಿ‌ ಭಾಗಿಯಾದವರ ಬಂಧನ ಸೂಚನೆ‌ ನೀಡಲಾಗಿದೆ. ಎಷ್ಟೇ ಪ್ರಭಾವಿ ಇರಲಿ, ಎಷ್ಟೇ ಕ್ಷಾಣಾಕ್ಷ ಇದ್ದರು ಬಂಧಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಜನರಿಗೆ ನ್ಯಾಯ ಸಿಗಲಿದೆ ಎಂದರು. ಸಂಪುಟ ವಿಸ್ತರಣೆ ನಾನು ಹೇಳಲಿ ಆಗುವುದಿಲ್ಲ, ಅದನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಬಳಿಕ ನಿರ್ಧಾರ ಹೊರಬರಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!