September 20, 2026
Sunday, September 20, 2026
spot_img

ದಿಢೀರ್‌ ಇನ್ಸ್‌ಪೆಕ್ಷನ್‌ನಲ್ಲಿ ಹಾಸ್ಟೆಲ್‌ನ ಟಾಯ್ಲೆಟ್‌ ಪರಿಶೀಲನೆ ಮಾಡಿದ ಸಿಎಂ ವಿಜಯ್‌! ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಜೋಸೆಫ್‌ ವಿಜಯ್‌ ಸೈದಾಪೇಟೆಯಲ್ಲಿರುವ ಹಾಸ್ಟೆಲ್‌ಗೆ ದಿಢೀರ್‌ ಭೇಟಿ ನೀಡಿದ್ದು, ಟಾಯ್ಲೆಟ್‌ನ್ನು ಕೂಡ ಖುದ್ದಾಗಿ ಪರಿಶೀಲನೆ ಮಾಡಿದ್ದಾರೆ.

ಚೆನ್ನೈನ ಎಂಸಿ ರಾಜಾ ಆದಿ ದ್ರಾವಿಡರ್‌ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಮಾತನಾಡಿ ಸಮಸ್ಯೆಯನ್ನು ಆಲಿಸಿದ್ದಾರೆ. ಯುವಕರ ಪ್ರಕಾರ ಹಾಸ್ಟೆಲ್‌ನಲ್ಲಿ ಊಟ ಚೆನ್ನಾಗಿಲ್ಲ, ಅನ್ನದಲ್ಲಿ ಹುಳಗಳ ಸಿಕ್ಕಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಎಲ್ಲರೂ ಬೀದಿಗಿಳಿದು ಪ್ರತಿಭಟನೆ ಮಾಡಿದ್ವಿ. ಸ್ವಲ್ಪ ದಿನ ಕ್ವಾಲಿಟಿ ಚೆನ್ನಾಗಿತ್ತು. ಈಗ ಮತ್ತದೇ ಕಥೆ ಎಂದು ಸಿಎಂಗೆ ದೂರಿದ್ದಾರೆ. ಸಿಎಂ ಹಾಸ್ಟೆಲ್‌ಗೆ ಎಂಟ್ರಿ ಕೊಡುವ ವೇಳೆ ಯುವಕರ ಗುಂಪು ಅವರ ಬಳಿ ಬಂದು ಮಾತನಾಡುತ್ತೇವೆಂದು ಮನವಿ ಮಾಡಿದೆ. ಸಿಎಂ ಅವರ ಮಾತನ್ನು ನಿಂತು ಆಲಿಸಿದ್ದಾರೆ.ನೀರು ಸರಬರಾಜು ಕೊರತೆ, ಗಲೀಜಾದ ಬಾತ್​ ರೂಮ್, ಸಿಬ್ಬಂದಿ ಕೊರತೆ, ಅಡುಗೆಮನೆಯಲ್ಲಿ ನೈರ್ಮಲ್ಯದ ಕೊರತೆ ಮತ್ತು ಸಿಸಿಟಿವಿ ಕಣ್ಗಾವಲು ಕೊರತೆಯ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅಡುಗೆ ಕೆಲಸಗಾರರು ಆಹಾರ ತಯಾರಿಸುವಾಗ ಕೈಗವಸು ಅಥವಾ ಕ್ಯಾಪ್‌ಗಳನ್ನು ಬಳಸುವುದಿಲ್ಲ ಎಂದಿದ್ದಾರೆ.

ಇನ್ನಿತರ ದೂರುಗಳು ಕೂಡ ಇದ್ದ ಸಿಎಂ ಎಲ್ಲವನ್ನೂ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಿಎಂ ಖುದ್ದಾಗಿ ಬಾತ್‌ರೂಮ್‌ನ ಸ್ವಚ್ಛತೆಯನ್ನು ನೋಡಿದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !